ಬೆಂಗಳೂರು,ಫೆಬ್ರವರಿ,07,2021(www.justkannada.in) : ಕೊರೊನಾದಿಂದಾಗಿ ಸಾಕಷ್ಟು ಸಂಕಷ್ಟ ಎದುರಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ ಹೇಗೆ ಎಚ್ಚರವಾಗಿರಬೇಕು ಎಂಬುದನ್ನು ಕಲಿಸಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 23ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ವೈದ್ಯರು ಶ್ರಮದಿಂದಾಗಿ ಬಹಳ ಬೇಗವೇ ಹಲವು ವ್ಯಾಕ್ಸಿನ್ ಗಳನ್ನು ಸಂಶೋಧನೆ ಮಾಡಲಾಗಿದ್ದು, ವಿದೇಶಗಳಿಗೂ ರವಾನೆ ಮಾಡಲಾಗುತ್ತಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಸಾರ್ವಜನಿಕರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಿದೆ. ವಿದ್ಯಾರ್ಥಿ ಜೀವನ ಇಲ್ಲಿಗೆ ಮುಗಿಯುವುದಿಲ್ಲ. ಆರೋಗ್ಯ ಕ್ಷೇತ್ರದ ಹೊಸ ಬೆಳವಣಿಗೆಗೆ ಸಹಕರಿಸಿ, ಸಂಶೋಧನೆಗಳ ಮೂಲಕ ಕೊರೊನಾದಂತಹ ವೈರಸ್ ಗಳನ್ನು ತಕ್ಷಣವೇ ನಿವಾರಣೆ ಮಾಡುವಂತೆ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದರು.
key words : future-How-alert-Corona-Taught-President-Ramanath Kovind