ಕಲಬುರಗಿ,ಸೆಪ್ಟಂಬರ್,9,2023(www.justkannada.in): ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಈ ಕುರಿತು ಸ್ವತಃ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಹ್ವಾನ ಇಲ್ಲದೆ ಜಿ20 ಸಭೆಗೆ ನಾನು ಹೇಗೆ ಹೋಗಲಿ. ಜಿ 20 ಸಭೆ ಸಮಾರಸ್ಯದ ಸಭೆ. ದೇಶದಲ್ಲಿ, ಪ್ರಪಂಚದಲ್ಲಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರುವುದು ಒಳ್ಳೆಯದು ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ, ಜೆಡಿಎಸ್ ಒಂದಾಗುವ ಪ್ರಯತ್ನ ಮಾಡುತ್ತಿದ್ದಾರೆ. ದೇವೇಗೌಡರು, ಮೋದಿ ಕೈಕೈ ಹಿಡಿದುಕೊಂಡಿದ್ದನ್ನು ನೋಡಿದ್ದೇನೆ. ಎಷ್ಟು ಸ್ಥಾನ ಕೇಳುತ್ತಾರೆ ಎಷ್ಟು ಸ್ಥಾನ ಕೊಡ್ತಾರೆಂಬುದು ಕ್ಲಿಯರ್ ಆಗಿಲ್ಲ. ಈ ನಡುವೆ ನಾವು 60% ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ. ಇಂಡಿಯಾ ಮೈತ್ರಿಕೂಟ ನಾಲ್ಕನೇ ಮೀಟಿಂಗ್ ಕೂಡ ಮಾಡುತ್ತಿದ್ದೇವೆ. ಜೆಡಿಎಸ್ ಐಡಿಯಾಲಜಿ ಚೇಂಜ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
Key words: G-20 meeting –without- invitation- AICC President- Mallikarjuna Kharge.