ನವದೆಹಲಿ,ಸೆಪ್ಟಂಬರ್,9,2023(www.justkannada.in): ನವದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿ20 ಶೃಂಗಸಭೆ ನಡೆಯುತ್ತಿದ್ದು ವಿಶ್ವ ಅಗ್ರ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ.
ಪ್ರಗತಿ ಮೈದಾನ್ ಅವರಣದ ಭಾರತ್ ಮಂಟಪಂನಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರನ್ನು ಸ್ವಾಗತಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನೆಕ್, ಕೆನಡಾದ ಜಸ್ಟಿನ್ ಟ್ರೂಡೋ ಸೇರಿ ಜಿ20 ಸದಸ್ಯ ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದಾರೆ.
ಎರಡು ದಿನಗಳ ಜಿ 20 ಸಮ್ಮೇಳನದ ಮೊದಲ ಅಧಿವೇಶನವು ‘ಒಂದು ಭೂಮಿ’ ವಿಷಯವನ್ನು ಆಧರಿಸಿದೆ. ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ ಎಂಬ ವಿಷಯವನ್ನು ಆಧರಿಸಿದೆ.
ಜಿ 20 ಶೃಂಗಸಭೆ ಹಿನ್ನೆಲೆ ರಾಷ್ಟ್ರ ರಾಜಧಾನಿಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೆಹಲಿಯಲ್ಲಿ ಇಂದು ಸಂಚಾರದ ಮೇಲೆ ಪರಿಣಾಮ ಬೀರಲಿದೆ. ದೆಹಲಿ ಪೊಲೀಸರು ಸಂಚಾರ ಸಲಹೆಯನ್ನು ಸಹ ನೀಡಿದ್ದಾರೆ. ಜಿ 20 ಸಮ್ಮೇಳನಕ್ಕೆ ಬಂದ ಜಾಗತಿಕ ನಾಯಕರ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ.
Key words: G20 summit – Delhi – two days – Leaders -world’s -top countries – participate.