ಗದಗ,ನ,1,2019(www.justkannada.in): ಕನ್ನಡ ಧ್ವಜಾರೋಹಣವನ್ನ ಸರ್ಕಾರ ರದ್ದು ಗೊಳಿಸಿದ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಎಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಗದಗ ನಗರದಲ್ಲಿ ಇಂದು ಮಾತನಾಡಿದ ಶಾಸಕ ಎಚ್ ಕೆ ಪಾಟೀಲ್ , ಇದು ಸರ್ಕಾರದ ಅಪ್ರಭುದ್ಧವಾದ ನಿರ್ಣಯ. ಸಮಂಜಸವಲ್ಲದ ಸಮಯದಲ್ಲಿ ಸರ್ಕಾರ ವಿವೇಚನೆ ಇಲ್ಲದೇ ಮಾಡಿದೆ. ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿ ಮಾಡುವುದೇ ನಿಮ್ಮ ಉದ್ದೇಶಾ ನಾ..? ಎಂದು ಪ್ರಶ್ನಿಸಿದರು.
ನೀವು ಹೊರಡಿಸಿರುವಂತಹ ಆದೇಶದಿಂದಾಗಿ ನಿಮಗೆ ಮುಖಭಂಗವಾಯಿತಲ್ಲ ಇದಕ್ಕಿಂತ ಹೆಚ್ಚಾಗಿ ಏನ್ ಆಗಬೇಕಿದೆ ನಿಮಗೆ. ನಿನ್ನೆ ಸರ್ಕಾರ ಕೈಗೊಂಡ ನಿರ್ಣಯ ಅಪಹಾಸ್ಯದ ನಿರ್ಣಯ ತೆಗೆದುಕೊಂಡಿದ್ದಾರೆ. ಇದಕ್ಕೆಲ್ಲ ಸಮಯ ಸರಿಯಾದ ನಿರ್ಣಯ ವಿಚಾರ ಮಾಡಬೇಕಿತ್ತು. ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಬೇಕಿತ್ತು. ಸಾಹಿತಿಗಳನ್ನ ಕರೆದು ಮಾತನಾಡಬೇಕಿತ್ತು ಎಂದು ಕಿಡಿಕಾರಿದರು.
Key words: gadag- cancellation -Kannada flag -HK Patil –outrage-government