ಮೈಸೂರು,ಆ,19,2020(www.justkannada.in): ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಇನ್ನ ಎರಡು ದಿನಗಳಷ್ಟೇ ಬಾಕಿ ಇದ್ದು ಕೊರೋನಾ ಹಿನ್ನೆಲೆ ಈ ಬಾರಿ ಗಣೇಶನ ಹಬ್ಬದ ಸಂಭ್ರಮ ಮನೆ ಮನೆಗಳಿಗೆ ಮಾತ್ರ ಸೀಮಿತವಾಗಲಿದೆ. ಹಾಗೆಯೇ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸರ್ಕಾರ ಕೆಲ ನಿಬಂದನೆಗಳನ್ನ ವಿಧಿಸಿ ಅವಕಾಶ ಮಾಡಿಕೊಟ್ಟಿದೆ.
ಈ ಮಧ್ಯೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನ ಕುವೆಂಪುನಗರದಲ್ಲಿನ ಸ್ಪಂದನ ಸಂಸ್ಥೆಯು ನೂತನ ಗಣಪ ಅಭಿಯಾನವನ್ನ ಹಮ್ಮಿಕೊಂಡಿದೆ. ಅಭಿಯಾನದ ಬಗ್ಗೆ ಮಾಹಿತಿ ನೀಡಿರುವ ಸ್ಪಂದನ ಸಂಸ್ಥೆ ಅಧ್ಯಕ್ಷ ಎಂ. ಜಯಶಂಕರ್, ನಿಮ್ಮ ಮನೆಯಲ್ಲಿ ನೀವೇ ತಯಾರಿಸಿ ಅಲಂಕಾರ ಮಾಡಿ ಪೂಜಿಸದ ಪರಿಸರ ಸ್ನೇಹಿ ಅರಿಸಿಣ ಗಣಪನ ಒಂದು ಚಂದದ ಫೋಟೊವನ್ನ ವಾಟ್ಸಪ್ ನಂ.9740000708 ಗೆ ಕಳುಹಿಸಿ. ಆಯ್ಕೆಯಾದ ಅತ್ಯುತ್ತಮ ಫೋಟೋಗೆ ಸ್ಪಂದನ ಸಂಸ್ಥೆ ವತಿಯಿಂದ ಬಹುಮಾನ ಮತ್ತು ಪ್ರಶಂಶನಾ ಪತ್ರವನ್ನ ಸೆಪ್ಟಂಬರ್ 10ರೊಳಗೆ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಯೂಟ್ಯೂಬ್ ಗೆ ಹೋಗಿ ಎಕೋಫ್ರೆಂಡ್ಲಿ ಟರ್ಮರಿಕ್ ಗಣೇಶ (Echo friendly turmeric-Genesha) ಅಂತ ಸರ್ಚ್ ಮಾಡಿ. ಅದರಂತೆ ಅರಿಸಿಣದಲ್ಲಿ ತಯಾರಿಸುವ ಗಣಪ ವಿಡಿಯೋ ನೋಡಿ. ಫೋಟೊವನ್ನು ಆಗಸ್ಟ್ 22 ರಿಂದ ಆಗಸ್ಟ್ 28ರೊಳಗೆ ಕಳುಹಿಸಿಕೊಡಿ ಎಂದು ಸ್ಪಂದನ ಸಂಸ್ಥೆ ಅಧ್ಯಕ್ಷ ಎಂ. ಜಯಶಂಕರ್ ತಿಳಿಸಿದ್ದಾರೆ.
Key words: ganapa abiyana- mysore- spandana-organization