ಬೆಂಗಳೂರು,ಜುಲೈ,21,2022(www.justkannada.in): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೈ ನಾಯಕರು, ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೇಂದ್ರ ಸರ್ಕಾರ ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿದೆ. ಬಿಜೆಪಿಯವರಿಗೆ ಗಾಂಧಿ ಕುಟುಂಬ ಅಂದರೆ ಭಯ ಸುಮ್ಮನೆ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡುತ್ತಿದ್ದಾರೆ. ರಾಹುಲ್ ಗಾಂಧಿಯನ್ನ 50 ಗಂಟೆಗಳ ಕಾಲ ವಿಚಾರಣೆ ಮಾಡಿದರು. ಇಡಿ ವಿಚಾರಣೆ ನಡೆಸಿರುವ ವಿಡಿಯೋ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ನಮ್ಮ ನಾಯಕರ ಮೇಲೆ ಸುಳ್ಳು ಕೇಸ್ ಹಾಕಿ ತನಿಖೆ ನಡೆಸುತ್ತಿರುವುದನ್ನ ಖಂಡಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂಧ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Gandhi family -afraid –BJP- DK Shivakumar
ENGLISH SUMMARY…
BJP is scared of the Gandhi family: They are slapping false cases and harassing- DKS
Bengaluru, July 21, 2022 (www.justkannada.in): The All India Congress Committee is protesting across the country in Sonia Gandhi’s interrogation case, including Karnataka. The Congress leaders in the State are also protesting against it.
In this connection, KPCC President D.K. Shivakumar today expressed his view that the Union Government is purposefully harassing the Congress leaders. “BJP is scared of Gandhi’s family. That is why they are slapping false cases and harassing them. Rahul Gandhi was interrogated for 50 hours. Let them release the entire interrogation video to the people,” he demanded.
“We are protesting against the slapping of false cases against our leaders. We will continue our protest against the Union Government,” he informed.
Keywords: D.K.Shivakumar/ AICC/ KPCC/ Sonia Gandhi/ Gandhi family/ BJP/ scared