ದೊಡ್ಡಬಳ್ಳಾಪುರ,ಸೆಪ್ಟಂಬರ್,10,2022(www.justkannada.in): ಕೋವಿಡ್ ವೇಳೆ ಬಡವರ ನೆರವಿಗೆ ಧಾವಿಸಿದ್ದು ಕೇಂದ್ರ ಸರ್ಕಾರ. ಮೋದಿ ಸರ್ಕಾರ ಬಡವರಿಗೆ ಉಚಿತ ರೇಷನ್ ನೀಡಿದೆ. ರಾಷ್ಟ್ರದ ಹಿತಕ್ಕಾಗಿ ಗಾಂಧಿ ಕುಟುಂಬ ಏನು ಮಾಡಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದರು.
ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸ್ಮೃತಿ ಇರಾನಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಭೇದ ಭಾವ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. 7 ವರ್ಷದದಿಂದ ಕೇಂದ್ರದಿಂದ ಹಲವು ಹೆದ್ದಾರಿಗಳ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದೆ. ದೇಶದಲ್ಲಿ ಎನ್ಎಪಿ ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ರೇಷ್ಮೆ ಅಭಿವೃದ್ದಿಗೆ ಕೇಂದ್ರ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ನಾನು ಕೇಳಲು ಬಯಸುತ್ತೇನೆ ದೇಶವನ್ನ ಇಬ್ಭಾಗ ಯಾರು ಮಾಡಿದ್ದಾರೆ ಮೊದಲು ಹೇಳಲಿ. ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಈ ಮೂಲಕ ಭಯೋತ್ಪಾದನೆ ಹರಡಲು ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಅವಹೇಳನ ಮಾಡಿದ್ರು ಬುಡಕಟ್ಟು ಮಹಿಳೆ ಉನ್ನತ ಹುದ್ದೇಗೇರಿದ್ದು ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ ಎಂದು ಸ್ಮೃತಿ ಇರಾನಿ ಆರೋಪಿಸಿದರು.
Key words: Gandhi family – not done – benefit – nation- Union Minister -Smriti Irani