ನವದೆಹಲಿ,ಡಿಸೆಂಬರ್,12,2020(www.justkannada.in): ಇವರ ಹೆಸರು ಗ್ಯಾನೇಂದ್ರ ಸಿಂಗ್. ಪ್ರತಿಷ್ಟಿತ ವಿಶ್ವ ವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಈಗ ವಾಸಿಸುವುದು ಪುಟ್ ಬಾತ್ ನಲ್ಲಿ. ಪುಟ್ ಪಾತ್ ನಲ್ಲಿ ವಾಸಿಸುತ್ತಿದ್ದರೂ ಇವರು ಮಾಡುವ ಕೆಲಸ ಮಾತ್ರ ಎಲ್ಲರೂ ಮೆಚ್ಚುವಂತಹದ್ದು.
ಹೌದು, 75 ವರ್ಷದ ಗ್ಯಾನೇಂದ್ರ ಸಿಂಗ್ ಅವರು ದೆಹಲಿಯ ಚಾಂದಿನಿ ಚೌಕ್ ಬಳಿ ಫುಟ್ ಪಾತ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಬಳಿಯಲ್ಲಿರುವ ಗುರುದ್ವಾರದಲ್ಲಿ ಸೇವೆ ಮಾಡಿಕೊಂಡು, ಗುರುದ್ವಾರಗೆ ಭೇಟಿ ನೀಡುವ ಜನರು ನೀಡುವ ಅಲ್ಪಸ್ವಲ್ಪ ಹಣದಲ್ಲಿ ಇವರು ಜೀವನ ಸಾಗಿಸುತ್ತಿದ್ದು, ಪ್ರತಿ ನಿತ್ಯ ಅದೇ ಹಣದಲ್ಲಿ ಸ್ವಲ್ಪ ಉಳಿಸಿ ಬೀದಿ ಬದಿಯ ನಾಯಿಗಳು ಹಾಗೂ ಹಕ್ಕಿಗಳಿಗೆ ಆಹಾರವನ್ನು ನೀಡುವ ಕಾಯಕದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇದಲ್ಲದೆ ತನ್ನ ಬಳಿಗೆ ಅನುಮಾನಗಳೊಂದಿಗೆ ಬರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಾರೆ. ಇನ್ನು ಇವರ ವಿದ್ಯಾರ್ಹತೆಗಳನ್ನ ಕೇಳಿದರೇ ಮಾತ್ರ ಎಲ್ಲರೂ ಅಚ್ಚರಿ ಬೀಳೋದು ಗ್ಯಾರಂಟಿ. ಹೌದು, ಗ್ಯಾನೇಂದ್ರ ಸಿಂಗ್ ಲಂಡನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ಮಾಡಿದ್ದಾರೆ.
ನ್ಯೂಯಾರ್ಕ್ ನ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದಿರುವ ಗ್ಯಾನೇಂದ್ ಸಿಂಗ್ ಯುಎಸ್ಎದಲ್ಲಿ ಅಡ್ವಾನ್ಸ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅಮೇರಿಕಾದ ಐದು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಪ್ರಿನ್ಸ್ಟನ್, ಶಿಕಾಗೊ, ವಾಷಿಂಗ್ಟನ್, ಕ್ಯಾಲಿಫೋರ್ನಿಯಾ ಹಾಗೂ ನ್ಯೂಯಾರ್ಕ್ ಗಳಲ್ಲಿ ತಲಾ ಎರಡೆರಡು ವರ್ಷಗಳ ಕಾಲ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದರ ಜತೆಗೆ ವಿಶ್ವ ಸಂಸ್ಥೆಯ ಪರಿಷತ್ನಲ್ಲಿ ಮುಖ್ಯ ಕಾರ್ಯದರ್ಶಿಯಾಗಿಯೂ ಗ್ಯಾನೇಂದ್ರ ಸಿಂಗ್ ಕಾರ್ಯನಿರ್ವಹಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಸ್ವತಂತ್ರ ಹಕ್ಕಿಯಂತೆ, ಎಲ್ಲಾ ಪ್ರಾಪಂಚಿಕ ಆಸೆಗಳು, ಗರ್ವವನ್ನು ತೊರೆದು ಜೀವಿಸುತ್ತಿರುವ ಈ ಗ್ಯಾನೇಂದ್ರ ಸಿಂಗ್ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುವಂತಹದ್ದು.
English summary….
Once a University Professor, now lives on footpath: His services are appreciated by all
New Delhi, Dec. 12, 2020 (www.justkannada.in): His name is Gyanendra Singh. He has served in reputed universities of the world, and presently staying on a footpath in Delhi. But, his services are appreciated by all.
Gyanendra Singh (75) stays on a footpath near Chandini Chowk in Delhi. He serves at the Gurudwara nearby and leads his life from the little money that he gets the gurudwara visitors. He saves a little money in it and also feeds street dogs and birds.
He also teaches engineering students who come to him with doubts, free of cost. A person who comes to know about his educational qualifications will be left mesmerized. Yes, Gyanendra Singh has a Ph.D. from the reputed Cambridge University, London!
He also has a Doctorate in Engineering from Princeton University, New York, and has served as a Professor of Advanced Engineering in the USA. He has also served as the Vice-Chancellor of the prestigious universities in Princeton, Chicago, Washington, California, and New York, two years in each university!
He also has served as the Chief Secretary of the United Nations Council. But, he is presently living his life like a free bird, free of materialistic life, which is appreciated by one and all.
Keywords: Gyanendra Singh/ Delhi/ footpath
Key words: Ganendra Singh- putpath- appreciated- worked –newdehli