ಬಾಗಲಕೋಟೆ,ಆ,10,2020(www.justkannada.in): ನಾವು ಸಾರ್ವಜನಿಕವಾಗಿ ಗಣೇಶ ಪ್ರತಿಷ್ಟಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ರೆ ಅರೆಸ್ಟ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು.
ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್ , ರಾಜ್ಯ ಸರ್ಕಾರ ಮುಂಬರುವ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಸಾರ್ವಜನಿಕವಾಗಿ ಏಕೆ ಗಣೇಶ ಪ್ರತಿಷ್ಟಾಪನೆ ಮಾಡಬಾರದು. ಕೊರೊನಾ ನಿಯಮ ಪಾಲಿಸಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀವಿ. ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ನಿಮಗೆ ತಾಕತ್ ಇದ್ದರೆ ಅರೆಸ್ಟ್ ಮಾಡಿ ಎಂದು ಹೇಳಿದರು.
ಬಾರ್, ಮಾಲ್ ಓಪನ್ ಮಾಡಲು ಅವಕಾಶ ನೀಡಿದ್ದೀರಿ. ಗಣೇಶ ಪ್ರತಿಷ್ಟಾಪನೆ ಏಕೆ ಬೇಡ…? ಮನೆಯಲ್ಲೇ ಪ್ರತಿಷ್ಟಾಪನೆ ಮಾಡಿ ಎಂದು ಹೇಳಲು ನಿವ್ಯಾರು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ಅಳವಡಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀವಿ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
Key words: Ganesha –festival-Arrest-Pramod Muthalik -challenge – government.