ಬೆಂಗಳೂರು,ಮೇ,20,2022(www.justkannada.in): ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ. ಮಹಿಳಾ ಅಪರಾಧಿ ತಾನಿಯಾ ಖಾನಂ ಗೆ 20 ವರ್ಷ ಶಿಕ್ಷೆ, ಅಪರಾಧಿ ಜಮಾಲ್ ಗೆ 5 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ಅವರಿಂದ ತೀರ್ಪು ಪ್ರಕಟಿಸಿದ್ದು, ಸೋಭುಜ್ ಶೇಖ್, ರಿದಯ್ ಬಾಬು,ರಕಿಬುಲ್ ಇಸ್ಲಾಂ ಸಾಗರ್,ಮಹಮ್ಮದ್ ಬಾಬು,ರಫ್ಸಾನ ಮಂಡಲ್, ತಾನಿಯಾ ಲೇ, ದಾಲಿಮ್, ಅಜೀಂ, ಜಮಾಲ್, ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಕಳೆದ ವರ್ಷ ಮೇ.18 ರಂದು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಕೇಸ್ ನಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಈ ಗ್ಯಾಂಗ್ ರೇಪ್ ಭಾರೀ ಸಂಚಲನ ಮೂಡಿಸಿತ್ತು. ವೀಡಿಯೋ ವೈರಲ್ ಆಗ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು.ಮೇ 27 ರಂದು ಎಫ್ಐಆರ್ ದಾಖಲಿಸಿದ್ದರು.
Key words: gang rape-case – Bangladeshi -young woman-life imprisonment