ಬೆಂಗಳೂರು,ಮೇ,27,2019(www.justkannada.in): ಕುಡಿಯುವ ನೀರು ಯೋಜನೆಗೆ ಅನುದಾನ. ರಾಯಚೂರು ಪ್ರತ್ಯೇಕ ವಿಶ್ವವಿದ್ಯಾನಿಲಯಕ್ಕೆ ಒಪ್ಪಿಗೆ ಸೇರಿದಂತೆ ಹಲವು ನಿರ್ಣಯಗಳನ್ನ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.
ವಿಧಾನಸೌಧದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣೇಭೈರೇಗೌಡ, ಕಲಬುರ್ಗಿ ವಿವಿಯೊಂದಿಗೆ ಇರುವ ವಿವಿಯಿಂದ ರಾಯಚೂರು ವಿಶ್ವವಿದ್ಯಾಲಯವಾಗಿ ಬೇರ್ಪಡಿಸುವ ನಿರ್ಧಾರಕ್ಕೆ, ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ 61 ಕೋಟಿ ಟೆಂಡರ್ ಗೆ ಸಮ್ಮತಿ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ 119 ಕೋಟಿ. ಹೊಳೇನರಸಿಪುರಕ್ಕೆ 17 ಕೋಟಿ, ಮೈಸೂರು ನಗರಕ್ಕೆ 58 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. ಇನ್ನು ಮದ್ದೂರು ಕುಡಿಯುವ ನೀರಿನ ಯೋಜನೆಗಾಗಿ 111 ಕೋಟಿ ಹಣ ಬಿಡುಗಡೆ. ಮೋಡಬಿತ್ತನಗೆ 63 ಕೋಟಿ ಹಣ ಬಿಡುಗಡೆಗೆ ಸಮ್ಮತಿಸಲಾಗಿದೆ ಎಂದರು.
ವಿಮಾನ ನಿಲ್ದಾಣ ಮಾಡುವ ಬಗ್ಗೆ ವರದಿ ತಯಾರು ಮಾಡುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 453 ಹುದ್ದೆಗಳ ಭರ್ತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಗರಸಭೆ ಚುನಾವಣೆಗೆ ನೋಟಾಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವ ಕೃಷ್ಣೇಭೈರೇಗೌಡ ತಿಳಿಸಿದರು.
Key words: grants for Drinking Water Project. agrees to establish a Raichur separate university
#Cabinet #meeting #DrinkingWater #minister #krisnabyregowda