”ಉದ್ಯಾನನಗರಿಯ” ಉದ್ಯಾನವನದಲ್ಲಿ ಉಚಿತ ವೈಫೈ ವ್ಯವಸ್ಥೆ : ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ

ಬೆಂಗಳೂರು,ನವೆಂಬರ್,01,2020(www.justkannada.in) : ಖಾಸಗಿಯವರು ಉದ್ಯಾನವನಗಳನ್ನು ಹೆಚ್ಚು ನಿರ್ವಹಿಸುವಂತಾಗಬೇಕು. ಆಗ ಉದ್ಯಾನಗಳು ಮತ್ತಷ್ಟು ನಳನಳಿಸುತ್ತಾ ನಗರಕ್ಕಿರುವ ʼಉದ್ಯಾನವನಗಳ ನಗರಿʼ ಎಂಬ ಹೆಸರು ಸಾರ್ಥಕವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

jk-logo-justkannada-logoರಾಜ್ಯೋತ್ಸವದ ಪ್ರಯುಕ್ತ ಸ್ಯಾಂಕಿ ಕೆರೆ ಸಮೀಪದಲ್ಲಿ ಗೋಕಾಕ್ ಚಳವಳಿಯ ಸ್ಮರಣಾರ್ಥ ವೃತ್ತದ ಉದ್ಯಾನವನದಲ್ಲಿ ಆಕ್ಟ್‌ ಪೈಬರ್‌ ನೆಟ್‌ವತಿಯಿಂದ ಮಾಡಲಾಗಿರುವ ಉಚಿತ ವೈಫೈ ವ್ಯವಸ್ಥೆಗೆ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ ನೀಡಿದರು.

ಆಕ್ಟ್‌ ಪೈಬರ್‌ನೆಟ್‌ ಉಪಕ್ರಮವನ್ನು ಶ್ಲಾಘಿಸಿದರಲ್ಲದೆ, ಮತ್ತಷ್ಟು ಖಾಸಗಿಯವರು ಮುಂದೆ ಬಂದು ಇನ್ನಷ್ಟು ಉದ್ಯಾನವನಗಳನ್ನು ನಿರ್ವಹಿಸುವಂತೆ ಆಗಬೇಕು ಎಂದರು. ಇಡೀ ಉದ್ಯಾನವನವನ್ನು ಒಂದು ಸುತ್ತುಹಾಕಿ ಎಲ್ಲರಿಗೂ ರಾಜ್ಯೋತ್ಸವ ಶುಭಾಶಯ ಕೋರಿದರು.

ಮಲ್ಲೇಶ್ವರದ ಭಾಗದ ಜನರ ಅಚ್ಚುಮೆಚ್ಚಿನ ತಾಣವಾಗಿರುವ ಈ ಉದ್ಯಾನವನ್ನು ಈ ಮೊದಲೇ ಡಿಸಿಎಂ ಅವರು ಉತ್ತಮವಾಗಿ ಅಭಿವೃದ್ಧಿಯಾಗುವಂತೆ ನೋಡಿಕೊಂಡಿದ್ದರು. ಇದೀಗ ಆ ಉದ್ಯಾನವನಕ್ಕೆ ಮತ್ತಷ್ಟು ಹೈಟೆಕ್‌ ಮೆರಗು ಬಂದಿದ್ದು, ಗೋಕಾಕ್‌ ಚಳವಳಿಯ ಇತಿಹಾಸದ ಸ್ಪರ್ಶ ನೀಡಲಾಗಿದೆ. ಇದೀಗ ಹಸಿರು-ಕೆಂಪು ಬಣ್ಣಗಳ ಥೀಮಿನೊಂದಿಗೆ ಕಂಗೊಳಿಸುತ್ತಿದೆ.

ಉದ್ಯಾನವನದಲ್ಲಿ ಏನೇನಿದೆ?

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನವಿರಬೇಕು ಹಾಗೂ ಕನ್ನಡವೇ ಆಡಳಿತ ಹಲವಾರು ಆಕೃತಿಗಳು, ಫಲಕಗಳನ್ನು ಅಳವಡಿಸಲಾಗಿದೆ. ಕನ್ನಡಿಗರಿಗೆ ಇಷ್ಟವಾಗುವುದರ ಜತೆಗೆ, ಇತಿಹಾಸಕಾರರಿಗೂ ಹೇಳಿ ಮಾಡಿಸಿದ ಅಧ್ಯಯನ ತಾಣವಾಗಿದೆ ಈ ಉದ್ಯಾನವನ.

ಜತೆಗೆ, ವಾಯುವಿಹಾರಕ್ಕೆ ಬರುವವರಿಗೆ ಉಚಿತ ವೈಫೈ ನೀಡಲಾಗುತ್ತಿದ್ದು, ಅದರ ವೇಗ 100 ಎಂಬಿಪಿಎಸ್‌ ಇರುತ್ತದೆ. ಬರುವವರು ತಮ್ಮ ಹೆಸರು ನೋಂದಾಯಿಸಿಕೊಂಡು ವೈಫೈಗೆ ಲಾಗಿನ್‌ ಆಗಬಹುದು. 45 ನಿಮಿಷ ಈ ಸೇವೆಯನ್ನು ಬಳಸಿಕೊಳ್ಳಬಹುದು.

ಮಕ್ಕಳ ಚಟುವಟಿಕೆಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ರಜಾ ದಿನಗಳಲ್ಲಿ ಚಿತ್ರ ರಚನೆ, ಕಥೆ ಹೇಳುವುದು, ನಟನೆ ಕಲಿಕೆ, ಮಡಿಕೆ ಮಾಡುವುದು ಸೇರಿ ಹಲವಾರು ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುವುದು. ಇದೀಗ ಉದ್ಯಾನವನದ ನಿರ್ವಹಣೆಯನ್ನು ಬಿಬಿಎಂಪಿಯಿಂದ ಆಕ್ಟ್‌ ಪೈಬರ್‌ನೆಟ್‌ ಸಂಸ್ಥೆಗೆ ವಹಿಸಲಾಗಿದೆ.

ಕಾರ್ಯಕ್ರಮದಲ್ಲಿ ಆಕ್ಟ್‌ ಪೈಬರ್‌ನೆಟ್‌ ಸಂಸ್ಥೆಯ ಉಪಾಧ್ಯಕ್ಷ ಸುನೀಲ್‌ ಯಜಮಾನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 Garden City-park-Free-WiFi-System-DCM Dr.C.N.Ashwatthanarayana- inauguration

ಮಲ್ಲೇಶ್ವರದ ಗೋಕಾಕ ಚಳವಳಿ ಸ್ಮರಣಾರ್ಥ ವೃತ್ತದ ಉದ್ಯಾನವನದ ನಿರ್ವಹಣೆ ಯ ಜವಾಬ್ದಾರಿ ಹೊತ್ತು ಆ್ಯಕ್ಟ್ ಫೈಬರ್ ನೆಟ್ ಹಿರಿಯ ಉಪಾಧ್ಯಕ್ಷ ಸುನಿಲ್ ಯಜಮಾನೆ ಅವರನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅಭಿನಂದಿಸಿದರು.

key words : Garden City-park-Free-WiFi-System-DCM Dr.C.N.Ashwatthanarayana- inauguration