ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಗೆ ಬರಲಿದ್ದಾರೆ : ಮಾಜಿ ಶಾಸಕ ಮಧು ಬಂಗಾರಪ್ಪ

ಬೆಂಗಳೂರು,ಮಾರ್ಚ್,12,2021(www.justkannada.in)  : ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದು, ನನ್ನ ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.jkಸುದ್ದಿಗಾರರ ಜೊತೆ ಮಾತನಾಡಿದ ಅವರು , ಈಗಾಗಲೇ ಅವರ ಜೊತೆಗೂ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಅವರು ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಸಹೋದರನ ರೀತಿ ಸಹಕಾರ

ಡಿ.ಕೆ.ಶಿವಕುಮಾರ್ ಸಹೋದರನ ರೀತಿ ಸಹಕಾರ ಕೊಟ್ಟಿದ್ದಾರೆ, ಅವರು ಬಂಗಾರಪ್ಪ ಅವರ ಅನುಯಾಯಿ, ಹೀಗಾಗಿ, ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದ್ದಾರೆ.

Geeta Shivraj Kumar-Not even-Congress-Coming up-Former MLA-Madhu Bangarappa

ಜೆಡಿಎಸ್ ಬಿಟ್ಟರೂ ಯಾರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಏನೇ ಹೇಳಿದರೂ ಅವರ ಬಗ್ಗೆ ತಮಗೆ ಅಪಾರ ಗೌರವಿದೆ ಎಂದು ತಿಳಿಸಿದ್ದಾರೆ.

 

key words : Geeta Shivraj Kumar-Not even-Congress-Coming up-Former MLA-Madhu Bangarappa