ಶಿವಮೊಗ್ಗ,ಜನವರಿ,22,2021(www.justkannada.in) : ಶಿವಮೊಗ್ಗದಲ್ಲಿ ನಡೆದ ಪ್ರಾಣಹಾನಿ ನೋವು ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಶೀಘ್ರವೇ ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿಯಿರುವ ಕ್ರಷರ್ನಲ್ಲಿ ನಿನ್ನೆ ರಾತ್ರಿ ದೊಡ್ಡ ಪ್ರಮಾಣದಲ್ಲಿ ಸಂಭವಿಸಿರುವ ಸ್ಫೋಟಕಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಶಿವಮೊಗ್ಗದ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಸ್ಫೋಟದ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಲಾಗಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳನ್ನು ತಪ್ಪಿಸಲು ಇಂತಹ ಘಟನೆಗಳು ಆಳವಾದ ತನಿಖೆಗೆ ಕರೆ ನೀಡುತ್ತವೆ ಎಂದರು.ದುಃಖಕರವಾದ ಹಾಗೂ ಆತಂಕಕಾರಿಯಾದ ಸುದ್ದಿಯಾಗಿದೆ. ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಹಾಯವನ್ನು ನೀಡುವಂತೆ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
English summary……
Explosion in Shivamogga: PM Narendra Modi, Rahul Gandhi condoles death of workers
Shivamogga, Jan. 22, 2021 (www.justkannada.in): Prime Minister Narendra Modi has tweeted that the death of several poor workers in the explosion that took place in Shivamogga yesterday is very painful. The State Government is doing all that it can to help the families of the deceased. Extending his condolences to the deceased, he said, “I wish a speedy recovery to all the injured in the incident.
AICC former President Rahul Gandhi also in his tweet has expressed his deep anguish about the incident. He has demanded the government to conduct an investigation and take necessary measures to prevent such incidents in the future.
Keywords: Shivamogga explosion/ accident/ PM Narendra Modi/ Rahul Gandhi/ tweet/ condolences
key words : gelatin-explosion-Prime Minister-Narendra Modi-Rahul Gandhi-condolences