ನವದೆಹಲಿ,ಡಿ,31,2019(www.justkannada.in): ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಇಂದು ಅಧಿಕಾರ ಸ್ವೀಕರಿಸಿದರು.
ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ಮಿಲಿಟರಿಯಲ್ಲಿರುವ ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ವಿಭಾಗಗಳಿವೆ. ಈ ಮೂರೂ ಸೇನೆಗಳಲ್ಲಿ ಸಹಕಾರ ಏರ್ಪಡಿಸುವ ಜವಾಬ್ದಾರಿ ಸಿಡಿಎಸ್ಗೆ ಇರುತ್ತದೆ.
ಈ ಸಿಡಿಎಸ್ ನ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನ ನೇಮಕ ಮಾಡಲಾಗಿದ್ದು ಇಂದು ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. 2017ರಲ್ಲಿ ಭೂಸೇನಾ ಮುಖ್ಯಸ್ಥರಾಗಿ ನೇಮಕಗೊಂಡು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಿಪಿನ್ ರಾವತ್ ನಿವೃತ್ತರಾಗಿದ್ದರು.
ಬಿಪಿನ್ ರಾವತ್ ಅವರ ನಿವೃತ್ತಿಯಿಂದ ತೆರಾವದ ಸ್ಥಾನಕ್ಕೆ ನರವಣೆ ನೇಮಕವಾಗಿದ್ದಾರೆ. ಭೂಸೇನೆಯ ಮುಖ್ಯಸ್ಥರಾಗಿ ಲೆ. ಜ. ನರವಣೆ ನೇಮಕಗೊಂಡಿದ್ದು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
Key words: General -Bipin Rawat – CDS- chief – Sworn power