ಬೆಂಗಳೂರು:ಆ-16:(www.justkannada.in) ಇಂಗ್ಲೀಷ್ ಮಾಧ್ಯಮದ ಒತ್ತಡದಿಂದ ಬೆಸತ್ತ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಟ್ಟದದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮಂಜುನಾಥನಗರದಲ್ಲಿ ನಡೆದಿದೆ.
ಇತ್ತೀಚೆಗಷ್ಟೆ ಬಾಲಕಿಯನ್ನು ಕನ್ನದ ಮೀಡಿಯಮ್ ನಿಂದ ಇಇಂಗ್ಲೀಷ್ ಮ್ಯೂಡಿಯಮ್ ಗೆ ಸೇರಿಸಲಾಗಿತ್ತು. ಏಕಾಏಕಿ ಇಂಗ್ಲೀಷ್ ಮಾಧ್ಯಮ ಆಕೆಗೆ ಕಷ್ಟವಾಗಿದ್ದು, ಕ್ಲಾಸಲ್ಲಿ ಹೇಳುತ್ತಿದ್ದ ಪಾಠಗಳು ಅರ್ಥವಾಗುತ್ತಿರಲಿಲ್ಲ. ಇದರಿಂದ ಆಕೆ ತನ್ನ ತಂದೆ-ತಾಯಿಗಳ ಬಳಿ ತನ್ನನ್ನು ಟ್ಯೂಷನ್ ಕ್ಲಾಸ್ ಗೆ ಕಳಿಸುವಂತೆ ಕೇಳಿದ್ದಳು. ಆದರೆ ಕೂಲಿಕಾರ್ಮಿಕರಾಗಿರುವುದರಿಂದ ಟ್ಯೂಷನ್ ಹಣ ಭರಿಸಲು ಸಾಧ್ಯವಿಲ್ಲವೆಂದು ಹೇಳಿ, ಕಷ್ಟಪಟ್ಟು ಕಲಿಯುವಂತೆ ಹೇಳಿದ್ದರು.
ಒಂದೆಡೆ ಅರ್ಥವಾಗದ ಇಂಗ್ಲೀಷ್ ಮಾಧ್ಯಮ, ಇನ್ನೊಂದೆಡೆ ಬಡತನದಿಂದ ಟ್ಯೂಷನ್ ಹೋಗೋದು ಕಷ್ಟ. ಇದರಿಂದ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ನಿರ್ಧರಿಸಿ ಕಟ್ಟಡದಿಂದ ಕೆಳಗೆ ಜಿಗಿದಿದ್ದಾಳೆ. ಇದನ್ನು ಕಂಡು ಪಾಲಕರಾದ ರಾಧಮ್ಮ ಹಾಗೂ ಮಾರಿಮುತ್ತು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಬೆನ್ನುಹುರಿ, ಕೈ-ಕಾಲುಗಳು ಮುರಿದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ದಂಪತಿಗಳಿಗೆ ಮೂವರು ಮಕ್ಕಳಿದ್ದು, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು. ಆತ್ಮಹತ್ಯೆಗೆ ಯತ್ನಿಸಿದ ಬಾಲಿಕಿ ಕಿರಿಯವಳಾಗಿದ್ದು, ಓದಿನಲ್ಲಿ ಕೂಡ ಮುಂದೆಯೇ ಇದ್ದಾಳೆ. ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು ಎಂದು ಪಾಲಕರು ತಿಳಿಸಿದ್ದಾರೆ.
ತಾಯಿ ರಾಧಮ್ಮ ಹೇಳುವ ಪ್ರಕಾರ 8ನೇ ತರಗತಿಯಿಂದ ಆಕೆಯನ್ನು ಇಂಗ್ಲೀಷ್ ಮಿಡಿಯಮ್ ಗೆ ಸೇರಿಸಲಾಗಿತ್ತು. 9ನೇ ತರಗತಿಯಲ್ಲಿ ಕೂಡ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಆದರೆ ಆಕೆ 10ನೇ ತರಗಿತೆ ಬರುತ್ತಿದ್ದಂತೆ ತುಂಬಾ ಒತ್ತಡದಲ್ಲಿರುತ್ತಿದ್ದಳು. ತನಗೆ ಕಡಿಮೆ ಮಾರ್ಕ್ಸ್ ಬರಬಹುದು. ತನ್ನನ್ನು ಟ್ಯೂಷನ್ ಗೆ ಕಳುಹಿಸುವಂತೆ ಹೇಳುತ್ತಿದ್ದಳು. ಆದರೆ ನಮಗೆ ಸಾದಧ್ಯವಾಗಿರಲಿಲ. ಹೀಗಾಗಿ ಪಕ್ಕದ ಮನೆಯವರಿಂದ ಪಾಠಹೇಳಿಸಿಕೊಳ್ಳುತ್ತಿದ್ದಳು್ ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹೆಚ್ ಎ ಎಲ್ ಪೊಲೀಸರು ಅಂದು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಅಲ್ಲಿದ್ದ ಮಕ್ಕಳನ್ನು ವಿಚಾರಿಸಿದ್ದು, ಅವರು ಹೇಳುವ ಪ್ರಕಾರ ಬೆಳಿಗ್ಗೆ ನಮೆಲ್ಲರ ಜತೆ ಆಟವಾಡುತ್ತಿದ್ದವಳು ಏಕಾಏಕಿ ಕಟ್ಟಡದ ಮೇಲೆ ಹೋಗಿ ಎಲ್ಲರಿಗೂ ಗುಡ್ ಬೈ ಹೇಳಿ ನಮ್ಮತ್ತ ಕೈಬೀಸುತ್ತಾ ಕೆಳಗೆ ಜಿಗಿದಿದ್ದಾಳೆ. ತಕ್ಷಣ ನಾವೆಲ್ಲ ಕೂಗಿಕೊಂಡೆವು ಎಂದು ತಿಳಿಸಿದ್ದಾರೆ. ಸಧ್ಯ ಐಸಿಯುನಲ್ಲಿರುವ ಬಾಲಕಿ ತೀವ್ರವಾಗಿ ಗಾಯಗೊಂದಿದ್ದು, ಆಕೆ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.