ಮೈಸೂರು,ನವೆಂಬರ್,24,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಹಳೇ ಮೈಸೂರು ಭಾಗಕ್ಕೂ ಪ್ರಾತಿನಿಧ್ಯ ನೀಡಬೇಕು. ಕೇಂದ್ರದಲ್ಲಿ ಶ್ರೀನಿವಾಸಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ. ಇಲ್ಲವಾದರೆ ರಾಜ್ಯದಲ್ಲಿ ನನಗಾದ್ರೂ ಮಂತ್ರಿ ಮಾಡಿ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಹರ್ಷವರ್ಧನ್, ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡ್ತಿದ್ದೀರಿ. ಬೆಳಗಾವಿಗೆ ಎಷ್ಟು ಸ್ಥಾನ ಕೊಟ್ಟಿದ್ದೀರಿ. ಅದೇ ರೀತಿ ಹಳೇ ಮೈಸೂರು ಭಾಗಕ್ಕೂ ಪ್ರಾತಿನಿಧ್ಯ ಸಿಗಬೇಕಲ್ಲವೇ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕ ಅಸಮತೋಲನ ನಿವಾರಿಸಿ. ಸಂಪುಟ ವಿಸ್ತರಣೆ ಮಾಡುವಾಗ ಅಸಮತೋಲನ ನಿವಾರಿಸಬೇಕೆಂದು ಕೇಳುತ್ತಲೇ ಇದ್ದೇನೆ ಎಂದರು.
ಕೇಂದ್ರದಲ್ಲಿ ಶ್ರೀನಿವಾಸಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ ಇಲ್ಲವಾದರೆ ನನಗಾದ್ರೂ ಮಂತ್ರಿ ಮಾಡಿ. ಮಂತ್ರಿಯಾಗುವ ಯೋಗ್ಯತೆ ಅರ್ಹತೆ ನನಗಿಲ್ಲವೇ..? ಐದು ಸಂಸತ್ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರದ ಶಾಸಕನಾಗಿರುವೆ. ಶ್ರೀನಿವಾಸ ಪ್ರಸಾದ್ ರ ಅನುಭವದೊಂದಿಗೆ ಆಡಳಿತ ಮಾಡುವೆ. ಪ್ರಸಾದ್ ರ ಸಂಘಟನೆ, ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ದಲಿತರಲ್ಲಿ ಬಲಗೈ ವರ್ಗಕ್ಕೆ ಪ್ರಾತಿನಿಧ್ಯ ಕೊಡಲೇಬೇಕು ಎಂದು ಶಾಸಕ ಹರ್ಷವರ್ಧನ್ ಒತ್ತಾಯಿಸಿದರು.
key words: Give – ministerial position – center-Srinivas Prasad- Otherwise- make me- minister-nanjanagud MLA- Harshvardhan