ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ಕೊರೊನಾ ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ ಕೇಳಿ ಬಂದಿದ್ದು, ಪಿಪಿಇ ಕಿಟ್ ಖರೀದಿಯ ಬಗ್ಗೆ ವರದಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಕಲಾಪದಲ್ಲಿ ಕೊರೋನಾ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, ಕೊರೋನಾ ಸೋಂಕು ತಡೆಗಟ್ಟಲು ಸರಕಾರವು ಹಲವು ಕಾರ್ಯಕ್ರಮ ಕೈಗೊಂಡಿದ್ದು, ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಕೇಳಿ ಬಂದಿದೆ. ಹೀಗಾಗಿ ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು, ಸತ್ಯ ಹೊರಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಷ್ಟು ಪಿಪಿಇ ಕಿಟ್ ಖರೀದಿಸಲಾಗಿದೆ? ಆರಂಭದಲ್ಲಿ 330 ರೂ. ಬೆಲೆಯಿದ್ದ ಪಿಪಿಇ ಕಿಟ್ ನಂತರ 2140 ರೂ. ಹೇಗಾಯಿತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವಂತೆ ತಿಳಿಸಿದ್ದಾರೆ. ಹಾಗೆಯೇ ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಪ್ರಕರಣ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು.
key words : Give-corona-PPE-Kit-Purchase-Report-siddaramaiah-Question