ಅರಮನೆ ನಗರಿಯಲ್ಲಿ ಝಗಮಗಿಸುವ ದೀಪಾಲಂಕಾರಕ್ಕೆ ಸಿದ್ಧತೆ: ವಿದ್ಯುತ್ ಬೆಳಕಿನಿಂದ ಕಂಗೊಳಿಸಲಿವೆ 100 ಕಿ.ಮೀ. ವ್ಯಾಪ್ತಿಯ 80 ವೃತ್ತಗಳು.

ಮೈಸೂರು,ಅಕ್ಟೋಬರ್,1,2021(www.justkannada.in):  ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಪ್ರತಿಕೃತಿ ಈ ಬಾರಿಯ ನಾಡಹಬ್ಬ ದಸರಾ ದೀಪಾಲಂಕಾರದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಒಟ್ಟು 100 ಕಿ.ಮೀ. ವ್ಯಾಪ್ತಿಯಲ್ಲಿ 80 ವೃತ್ತಗಳು ವಿದ್ಯುತ್ ಬೆಳಕಿನಿಂದ ಕಂಗೊಳಿಸಲಿವೆ.

ಕಳೆದ ಬಾರಿ ಕೋವಿಡ್ ಕಾರಣದಿಂದ ಕೇವಲ 50 ಕಿ.ಮೀ. ವ್ಯಾಪ್ತಿಯಲ್ಲಿ ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿ ಹಾಗೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗಿತ್ತು. ಆದರೆ, ಈ ವರ್ಷ ಕೊರೊನಾ ಸ್ವಲ್ಪ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ 26 ಮಹನೀಯರ ಪ್ರತಿಕೃತಿಗಳು ವಿದ್ಯುತ್ ವೈಭವದಿಂದ ಝಗಮಗಿಸಲಿವೆ. ಅಲ್ಲದೆ, ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವುದರಿಂದ ನಗರದ 4 ಕಡೆ ಅಮೃತ ಮಹೋತ್ಸವದ ಸಂದೇಶವನ್ನು ದೀಪಗಳು ಸಾರಲಿವೆ.

ಅ.7ರಿಂದ 15ರವರೆಗೆ ದೀಪಾಲಂಕಾರ ನಡೆಯಲಿದ್ದು, ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9.30ರವರೆಗೆ ಉರಿಯಲಿದೆ. ಇದರ ಮುತುವರ್ಜಿಗಾಗಿ ಪ್ರತಿ ಕಿಲೋಮೀಟರ್ ಹಾಗೂ ವೃತ್ತಕ್ಕೆ ಒಬ್ಬರಂತೆ ಸಿಬ್ಬಂದಿ ನಿಯೋಜಿಸಲಾಗಿದೆ. 8 ಮಂದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಇಬ್ಬರು ‌ಕಾರ್ಯಪಾಲಕ ಎಂಜಿನಿಯರ್ ಹಾಗೂ ಒಬ್ಬ ಸೂಪರಿಡೆಂಟ್ ಎಂಜಿನಿಯರ್ ಮಾರ್ಗದರ್ಶನದಲ್ಲಿ ದೀಪಾಲಂಕಾರ ಪ್ರಕ್ರಿಯೆ ನಡೆಯಲಿದೆ. 10 ಸೇವಾ ವಾಹನ ಕೆಲಸ ಮಾಡಲಿವೆ.

26 ಮಹನೀಯರ ಪ್ರತಿಕೃತಿ:

ಪ್ರತಿ ವರ್ಷದಂತೆ ನಗರದ ಪ್ರಮುಖ ರಸ್ತೆಗಳಿಗೆ ಮಹನೀಯರ ಪ್ರತಿಕೃತಿಯನ್ನು ವಿದ್ಯುತ್ ದೀಪದಿಂದ ಅಲಂಕೃತಗೊಳಿಸಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ರಾಜೇಂದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಸೇರಿದಂತೆ 26 ಪ್ರತಿಕೃತಿಗಳು ಈ ಬಾರಿಯ ಪ್ರಮುಖ ಆಕರ್ಷಣೆ.  ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾಘಿಪ್ರತಿಕೃತಿಯನ್ನು ಮಹಾರಾಜ ಅಥವಾ ಓವಲ್ ಮೈದಾನದಲ್ಲಿ ಅಳವಡಿಸಲಾಗುತ್ತದೆ. ರಾಜಮಾರ್ಗ ಸಂಪೂರ್ಣ ಬನ್ನಿಮಂಟಪದವರೆಗೆ ಗೋಲ್ಡನ್ ಕಲರ್ ದೀಪಗಳು ಬಂದರೆ, ಉಳಿದ ಕಡೆ ಎಲ್‌ ಇಡಿ ದೀಪಗಳು ದಸರಾ ಸಂಭ್ರಮವನ್ನು ಹೆಚ್ಚಿಸಲಿವೆ. ಇದರಿಂದ 10ನೇ ಒಂದರಷ್ಟು ವಿದ್ಯುತ್ ಉಳಿತಾಯವಾಗಲಿದೆ.

4 ಕಡೆ ಅಮೃತ ಮಹೋತ್ಸವ ಅಲಂಕಾರ:

ಮೈಸೂರು-ಬೆಂಗಳೂರಿಗೆ ಪ್ರವೇಶ ಕಲ್ಪಿಸುವ ಹೆದ್ದಾರಿ ದ್ವಾರದಲ್ಲೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದೀಪಾಲಂಕಾರ ಪ್ರವಾಸಿಗರನ್ನು ಸ್ವಾಗತಿಸಲಿದೆ. ಅಲ್ಲದೆ, ಹಾರ್ಡಿಂಗ್ ಸರ್ಕಲ್‌ನಲ್ಲಿ ಮತ್ತೊಂದು ಪ್ರತಿಕೃತಿ ಅಳವಡಿಸಲಾಗುತ್ತದೆ. ಅಂದಾಜು 1.25 ಲಕ್ಷ ಯುನಿಟ್ ವಿದ್ಯುತ್ ಇದಕ್ಕಾಗಿ ಬಳಕೆಯಾಗಲಿದೆ. 4.5 ಲಕ್ಷ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು, ದಾನಿಗಳ ನೆರವು ಪಡೆದುಕೊಳ್ಳಲು ಸೆಸ್ಕ್ ಚಿಂತನೆ ನಡೆಸಿದೆ. ಅರಮನೆ, ದುರ್ಗಾ, ವಿಷ್ಣುಘಿ, ರಥ ರೂಪದ ದೀಪಗಳು ಇರಲಿದ್ದುಘಿ, ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿಬೆಟ್ಟದ ಮಧ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಸ್ವಾಗತ ವಿದ್ಯುತ್ ದೀಪ ದಸರಾ ಮೆರುಗನ್ನು ಹೆಚ್ಚಿಸಲಿದೆ.

ಒಟ್ಟು 100  ಕಿ.ಮೀ ವ್ಯಾಪ್ತಿಯಲ್ಲಿ 80 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತಿದ್ದು ಒಟ್ಟು1.25 ಲಕ್ಷ  ವಿದ್ಯುತ್ ಯುನಿಟ್ ಬಳಕೆ ಮಾಡಲಾಗುತ್ತಿದೆ.

ಈ ಬಾರಿ 100 ಕಿ.ಮೀ. ವ್ಯಾಪ್ತಿಯಲ್ಲಿ ನಗರದಾದ್ಯಂತ ವಿದ್ಯುತ್ ದೀಪಗಳು ಕಂಗೊಳಿಸಲಿವೆ. ಬೆಟ್ಟದಲ್ಲಿ ವೆಲ್‌ಕಮ್ ದೀಪಗಳು ಇರಲಿವೆ. 26 ಮಹನೀಯರ ಪ್ರತಿಕೃತಿಗಳು ಪ್ರವಾಸಿಗರನ್ನು ಆಕರ್ಷಿಸಲಿವೆ. ಎಲ್ಲಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

4 ಕಡೆ ಅಮೃತ್ ಮಹೋತ್ಸವ ಹಾಗೂ 1 ಕಡೆ ನೀರಜ್ ಚೋಪ್ರಾ ಅವರ ಪ್ರತಿಕೃತಿ ಈ ಬಾರಿಯ ದೀಪಾಲಂಕಾರದ ಆಕರ್ಷಣೆ.  ಒಟ್ಟು 80 ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ನಿಗದಿತ ಸಮಯಕ್ಕೆ ನಮ್ಮ ಗುರಿ ಸಾಧನೆ ಮಾಡಲಾಗುವುದು ಎಂದು  ಸೆಸ್ಕ್ ಅಧೀಕ್ಷಕ ಎಂಜಿನಿಯರ್ ನಾಗೇಶ್ ಎಸ್ ತಿಳಿಸಿದ್ದಾರೆ.

Key words: glowing lights –mysore dasra-Electric- lighting – cover- 100 km.

ENGLISH SUMMARY…

Mysuru preparing for illumination: 80 circles to dip in shower of lights
Mysuru, October 1, 2021 (www.justkannada.in): A model of the Olympic gold medal winner Neeraj Chopra will be one of the major attractions in this year’s Mysuru Dasara Mahotsav. About 80 circles in the 100 km vicinity of the city will be illuminated.
Last year the illumination was restricted to 50 km due to COVID-19 Pandemic. This year, as the effect of the COVID-19 Pandemic, has reduced 26 major circles in the city limits will be illuminated. Special illumination, with a message on the occasion of 75th Independence day, will be made at 4 major circles. The illumination arrangements will be from October 7 to 15, daily from 7.00 pm to 9.30 pm. An observer will be watching the arrangements every km. The illumination works will be made under the guidance of eight assistant executive engineers, two executive engineers, and one superintendent engineer. Ten service vehicles will be pressed into service.
Keywords: Mysuru Dasara Mahotsav/ illumination/