ಉತ್ತರ ಪ್ರದೇಶ,ಅಕ್ಟೋಬರ್,14,2022(www.justkannada.in): ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸುವುದಕ್ಕೆ ಅನುಮತಿ ನೀಡಲು ವಾರಣಾಸಿ ಜಿಲ್ಲಾ ಕೋರ್ಟ್ ನಿರಾಕರಿಸಿದೆ.
ಶಿವಲಿಂಗದ ವೈಜ್ಞಾನಿಕ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಕೋರಿ ಹಿಂದೂಗಳು ಸಲ್ಲಿಸಿದ್ಧ ಅರ್ಜಿಯನ್ನ ವಾರಣಾಸಿ ಜಿಲ್ಲಾಕೋರ್ಟ್ ನ್ಯಾಯಾಧೀಶ ಅಜಯ್ ಕೃಷ್ಣ ವಜಾಗೊಳಿಸಿದ್ದಾರೆ. ಈ ಮೂಲಕ ಜ್ಞಾನ್ವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಮತ್ತು ವೈಜ್ಞಾನಿಕ ತನಿಖೆ ನಡೆಸಬೇಕೆಂಬ ಹಿಂದೂ ಪಕ್ಷದ ಬೇಡಿಕೆ ತಿರಸ್ಕೃತವಾಗಿದೆ.
ಕಾರ್ಬನ್ ಡೇಟಿಂಗ್ ನಡೆಸಿದರೇ ಸಾಕ್ಷಿಗೆ ಹಾನಿಯಾಗಬಹುದು. ಜಾಗವನ್ನ ಸೀಲ್ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಸುಪ್ರೀಂ ಆದೇಶ ಉಲ್ಲೇಖಿಸಿ ಈ ಮಹತ್ವದ ತೀರ್ಪನ್ನ ಕೋರ್ಟ್ ನೀಡಿದೆ.
Key words: Gnanavapi –Masjid- Controversy- Court- refuses – carbon dating -Shivlinga.