ಬೆಂಗಳೂರು,ಡಿಸೆಂಬರ್,30,2022(www.justkannada.in): ಕಳಸಾ ಬಂಡೂರಿ ಯೋಜನೆಗೆ ವಿರೋಧಿಸಿದ ಗೋವಾ ಸಿಎಂ ಸಾವಂತ್ ಗೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಗೋವಾ ಮುಖ್ಯಮಂತ್ರಿಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶ ಕಾನೂನಿನಿಂದ ನಡೆಯುತ್ತಿದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ ಇದೆ. ಸುಪ್ರೀಂಕೋರ್ಟ್ ಇದೆ, ನ್ಯಾಯ ಮಂಡಳಿಯಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿ ನಿರ್ಧಾರವನ್ನು ತಿಳಿಸಿದೆ. ಪ್ರಧಾನಿ ಮೋದಿ ಸರ್ಕಾರವೇ ನೋಟಿಫಿಕೇಷನ್ ಹೊಡೆರಿಸಿತ್ತು. ಈಗ ಯೋಜನೆಯ ಡಿಪಿಆರ್ ಗೆ ಒಪ್ಪಿಗೆ ಸೂಚಿಸಿದೆ. ಮುಂದಿನ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆಯಲಿದೆ ಎಂದರು.
ನ್ಯಾಯಮಂಡಳಿಯು ನಮ್ಮ ಹಾಗೂ ಗೋವಾ ಬೇಡಿಕೆಯನ್ನು ಆಲಿಸಿದೆ. ಯಾರಿಗೂ ಧಕ್ಕೆಯಾಗದಂತೆ ನ್ಯಾಯಮಂಡಲಿ ತೀರ್ಪು ನೀಡಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Key words: Goa CM –opposing- Kalasa Banduri –project- CM-Basavaraja Bommai