ಮೈಸೂರು, ಅಕ್ಟೋಬರ್ 12, 2022(www.justkannada.in): ಗೋವಾ ಸರ್ಕಾರ ಪೋರ್ಚಗೀಸರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡು 60 ವರ್ಷಗಳಾಗಿದ್ದು, ಈ ವರ್ಷವನ್ನು ಗೋವಾ@೬೦ ಎಂಬ ಶೀರ್ಷಿಕೆಯಡಿ ವಿಶೇಷವಾಗಿ ಆಚರಿಸಲು ನಿರ್ಧರಸಿದೆ.
ಡಿಸೆಂಬರ್ 19, 2021 ರಲ್ಲಿ ಗೋವಾ ಸರ್ಕಾರ ಭಾರತದ ಅಂದಿನ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ ಅವರ ಉಪಸ್ಥಿತಿಯಲ್ಲಿ ವಜ್ರ ಮಹೋತ್ವವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಹಲವಾರು ಕಾರ್ಯಕ್ರಮಗಳೂ ನಡೆದವು. ಗೋವಾದಲ್ಲಿ ಅದ್ವಿತೀಯವಾದ ಕಾರ್ಯಕ್ರಮಗಳ ಆಚರಣೆಯ ನಂತರ, ಗೋವಾ ಸರ್ಕಾರ ದೇಶದಾದ್ಯಂತ ತನ್ನ ವಜ್ರ ಮಹೋತ್ಸವಾಚರಣೆಯನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿತು. ಅಹ್ಮದಾಬಾದ್ ನಿಂದ ಆರಂಭಗೊಂಡು, 9 ರಿಂದ ಅಕ್ಟೋಬರ್ 16, 2022ರವರೆಗೆ ಉದಯಪುರ, ವಾರಣಾಸಿ, ಮಧುರೈ, ತಿರುವನಂತಪುರಂ ನಗರಗಳಲ್ಲಿ ಈವರೆಗೆ ಮಹೋತ್ಸವಗಳನ್ನು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಕ್ಟೋಬರ್ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಮಹೋತ್ಸವವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಮೈಸೂರಿನ ನಜರ್ ಬಾದ್ ಮೊಹಲ್ಲಾದಲ್ಲಿರುವ ಹೈದರ್ ಆಲಿ ರಸ್ತೆಯಲ್ಲಿರುವ ನೆಕ್ಸಸ್ ಸಿಟಿ, ನಂ.೮ & ಎನ್-೫ನಲ್ಲಿ ಆಯೋಜಿಸಲಾಗಿದೆ.
ಮೈಸೂರಿಗರು ಈ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಗೋವಾದ ವೈವಿಧ್ಯಮಯ ಆಹಾರ, ಸಂಗೀತ, ನೃತ್ಯ, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಸಾಕ್ಷಿಯಾಗಬಹುದು. ಈ ಮಹೋತ್ಸವದ ಪ್ರಮುಖ ಆಕರ್ಷಣೆಗಳೆಂದರೆ ಗೋವಾದ ಸ್ಥಳೀಯ ಸಂಗೀತ ತಂಡಗಳಾದ ಕ್ಲಿಕ್ಸ್ ಬ್ಯಾಂಡ್, ದಿ ಸ್ಟೀಲ್ ಜೊತೆ ಶಿಗ್ಮೊ ಪರೇಡ್, ಘೋಡೆ ಮೋಡ್ನಿ, ಝ್ಯಾಗೊರ್, ಡಿವ್ಲಿಗಳಂತಹ ಸಾಂಸ್ಕೃತಿಕ ನೃತ್ಯಗಳೂ ಇರುತ್ತವೆ. ಜೊತೆಗೆ ಲ್ಯಾಂಪ್ ನೃತ್ಯ, ಕೊಟ್ಟಿ ಫುಗ್ಡಿ (ತೆಂಗಿನ ಚಿಪ್ಪಿನ ನೃತ್ಯ), ಪೋರ್ಚಗೀಸ್ ಕಾರಿಡಿನ್ಹೋ ಹಾಗೂ ಕಾರ್ನಿವಾಲ್ ಪರೇಡ್ ಗಳನ್ನು ಗೋವಾದ ನೃತ್ಯ ತಂಡ ಪ್ರದರ್ಶಿಸಲಿದೆ. ಗೋವಾದ ಕಾರ್ನಿವಾಲ್ ನ ಸುಪ್ರಸಿದ್ಧ ಕಿಂಗ್ ಮೊಮೊ ಪ್ರಮುಖ ಆಕರ್ಷಣೆಯಾಗಿರುತ್ತದೆ.
ಗೋವಾ ಸರ್ಕಾರ ಭವಿಷ್ಯದಲ್ಲಿ ಮೋಪಾದಲ್ಲಿ ನೂತನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಸೇವೆಗಳು, ಉತ್ತಮ ಸಾರಿಗೆ ಸೌಲಭ್ಯಗಳು ಹಾಗೂ ಸ್ಥಳೀಯರು ಹಾಗೂ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಎಲ್ಲರಿಗೂ ಹೆಚ್ಚಿನ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗೋವಾ ರಾಜ್ಯವನ್ನು ಒಂದು ಹೊಸ ಎತ್ತರಕ್ಕೆ ಕೊಂಡೊಯ್ಯುವ ದೃಷ್ಟಿಯನ್ನು ಇಟ್ಟುಕೊಂಡಿದೆ.
ಈ ಮಹೋತ್ಸವ, ಪೂರ್ಚಗಿಸರಿಂದ ಗೋವಾವನ್ನು ಸ್ವತಂತ್ರಗೊಳಿಸಲು ಹೋರಾಡಿದ ಸ್ಥಳೀಯರಿಗೆ ಗೌರವವನ್ನು ಸಲ್ಲಿಸುವ ಹಾಗೂ ಸನ್ಮಾನಿಸುವ ಉದ್ದೇಶವನ್ನೂ ಹೊಂದಿದೆ. ಗೋವಾ ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಈ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 13 ರಂದು, ಅಂದರೆ ಗುರುವಾರದಂದು ಮೈಸೂರಿನಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಗೋವಾ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಗಜಾನನ್ ಮಹಲೆ, ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸಜುಲೊ ಕೃಷ್ಣ ನಾರ್ವೇಕರ್, ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಅನಿಲ್ ದಲಾಲ್, ಗೋವಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ಪ್ರವಾಸೋದ್ಯಮ ಅಧಿಕಾರಿ ಜಯೇಶ್ ಕನ್ಕೋನ್ಕರ್, ಗೋವಾದ ಸಾರ್ವಜನಿಕ ಮಾಹಿತಿ ಮತ್ತು ಪ್ರಚಾರ ಇಲಾಖೆಯ ಅನುವಾದಕ ವಿಷ್ಣು ಗೌಂವ್ಕರ್, ಕು. ರಸಿಕಾ ನಾಯಕ್ ಒಳಗೊಂಡಂತೆ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸ್ಥಳ: ಫಾರ್ಚ್ಯೂನ್ ಜೆಪಿ ಪ್ಯಾಲೆಸ್, ನಂ. 3, ಅಬ್ಬಾ ರಸ್ತೆ, ನಜರ್ಬಾದ್, ಮೈಸೂರು, ಕರ್ನಾಟಕ. ಸಭಾಂಗಣದ ಹೆಸರು: ಚಾಲುಕ್ಯ; ಸಮಯ: ಸಂಜೆ 4 ಗಂಟೆಗೆ.
Key words: Goa@60- program –organized- Goa Government – Mysore.