ಮಂಗಳೂರು,ಮೇ,25,2022(www.justkannada.in): ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ: ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿ ಇತ್ತು. ಇಲ್ಲಿದ್ದ ದೇವಸ್ಥಾನ ಯಾವುದೋ ವಿವಾದಕ್ಕೆ ನಾಶವಾಗಿತ್ತು ಎಂದು ತಾಂಬೂಲ ಪ್ರಶ್ನೆ ವೇಳೆ ಕೇರಳಾದ ಖ್ಯಾತ ಜ್ಯೋತಿಷಿ ವೇಳೆ ಜೆ.ಪಿ. ಗೋಪಾಲಕೃಷ್ಣ ಪಣಿಕರ್ ತಿಳಿಸಿದ್ದಾರೆ.
ಈ ಕುರಿತು ತಾಂಬೂಲ ಪ್ರಶ್ನೆ ವೇಳೆ ಮಾಹಿತಿ ನೀಡಿರುವ ಜೆ.ಪಿ. ಗೋಪಾಲಕೃಷ್ಣ ಪಣಿಕರ್, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿ ಇತ್ತು. ಇಲ್ಲಿ ಹಿಂದೂ ಧಾರ್ಮಿಕ ಸ್ಥಳ ಇತ್ತು. ಈ ಸ್ಥಳದಲ್ಲಿ ಹಿಂದೆ ಗುರುಪೀಠ ಇತ್ತು ಯಾವುದೋ ಒಂದು ಕಾಲದಲ್ಲಿ ದೇವಾಲಯ ಇತ್ತು. ಇದು ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ತಿಳಿದು ಬರುತ್ತಿದೆ ಎಂದು ಹೇಳಿದ್ದಾರೆ.
ದೇವರ ಸಾನಿಧ್ಯದ ಅಭಿವೃದ್ದಿಗೆ ಮುಂದಾಗಬೇಕು. ನಾಶವಾದ ಸಾನ್ನಿಧ್ಯವನ್ನ ಮತ್ತೆ ಸ್ಥಾಪಿಸಬೇಕು. ಸಾನ್ನಿಧ್ಯ ಮರುಸ್ಥಾಪನೆ ಆಗದಿದ್ದರೇ ಊರಿಗೆ ಕೆಡಕು. ಮರು ಸ್ಥಾಪನೆ ಮಾಡದಿದ್ದರೇ ಊರಿಗೆ ಒಳ್ಳೆಯದಾಗಲ್ಲ ಎಂದು ಗೋಪಾಲಕೃಷ್ಣ ಪಣಿಕರ್ ಎಚ್ಚರಿಕೆ ನೀಡಿದ್ದಾರೆ.
ಈ ಮೂಲಕ ತಾಂಬೂಲ ಪ್ರಶ್ನೆ ಆಧಾರದ ಮೇಲೆ ಮಸೀದಿಯಲ್ಲಿ ಶಿವಸಾನಿಧ್ಯದ ಸುಳಿವು ಪತ್ತೆಯಾಗಿದೆ. ಮಂಗಳೂರಿನ ಮಳಲಿಯ ಜುಮಾ ಮಸೀದಿಯಲ್ಲಿ ದೇವರು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಮಸೀದಿಯ ಕೆಳಗೆ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸಗಳು ಕಂಡುಬಂದಿದ್ದು, ಇದು ವಿವಾದಕ್ಕೆ ಕಾರಣವಾಗಿದ್ದರಿಂದ ತಾಂಬೂಲ ಪ್ರಶ್ನೆ ಕೇಳಲಾಗಿತ್ತು.
Key words: God –malali-mosque-JP Gopalakrishna Panicker -Information.