ಬೆಂಗಳೂರು,ಸೆಪ್ಟೆಂಬರ್,29,2020(www.justkannada.in) : ಸದನದಲ್ಲಿ ಯಾವುದೆ ಹುರುಳಿಲ್ಲದೆ ಆರೋಪಗಳನ್ನು ಮಾಡಿದ ವ್ಯಕ್ತಿ ಎಂದರೆ ಅದು ಮಾಜಿ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದರು.
ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಸದನಕ್ಕೆ ಸಂಬಂಧವಿರದೆ ಇರುವ ವ್ಯಕ್ತಿಗಳ ಹೆಸರು ಹಿಡಿದು ವಿಜಯೆಂದ್ರ ಹಾಗೂ ಸಿಎಂ ಯಡಿಯೂರಪ್ಪ ಅವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಡಿಎ ಹಾಗೂ ಕೋವಿಡ್ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳೆಲ್ಲವೂ ಬೆಸ್ ಲೆಸ್ ಆರೋಪಗಳು. ಕಾನೂನು ರೀತಿಯಲ್ಲಿ ಅವರು ಮಾತನಾಡಲಿ. ಇಂತಹ ಬೇಸ್ ಲೆಸ್ ಆರೋಪಗಳು ಮಾಡುವ ಇವರಿಗೆಲ್ಲಾ ಏನಾಗಿದೆ ಎಂದು ಪ್ರಶ್ನಿಸಿದರು.
ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಇನ್ನು ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ. ಅದನ್ನು ಸಿಎಂ ಮತ್ತು ಶಿಕ್ಷಣ ಸಚಿವರು ತೀರ್ಮಾನಿಸುತ್ತಾರೆ. ನಮಗೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷಿತೆ ಮುಖ್ಯ ಅದನ್ನು ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಡೆಪ್ಯೂಟಿ ಸಿಎಂ ವಿಚಾರ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ನೋಡೋಣ ನಾನು ಜನರಿಂದ ಮೇಲೆ ಬಂದಿರುವನು ರಾಜಕಾರಣ ಮಾಡಿಕೊಂಡು ಬಂದವನಲ್ಲ. ನಾನು ಕೂಡ ಅಂತಹ ಸ್ಥಾನವನ್ನು ನಿಭಾಯಿಸುವ ಶಕ್ತಿ ಭಗವಂತ ನೀಡಿದ್ದಾನೆ ಎಂದರು.
ಶಿರಾ ಮತ್ತು ಇನ್ನೊಂದು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
key words : God-given-power-handle-given-position-Minister-Sriramulu