ಮೈಸೂರು,ಡಿಸೆಂಬರ್,04,2020(www.justkannada.in) : ನಾವು ದೇವರನ್ನೆ ಏಕವಚನದಲ್ಲಿ ಕರೆಯುತ್ತೇವೆ. ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ವಿಶ್ವನಾಥ್‌ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯನವರೇ ಏಕವಚನ ಮಾತು ಕಡಿಮೆ ಮಾಡಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ದೇವರನ್ನೆ ಏಕವಚನದಲ್ಲಿ ಕರೆಯುತ್ತೇವೆ. ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ಮಹದೇಶ್ವರರೂ ಅಂತ ಕರಿತೀವೋ..?ವಿಶ್ವನಾಥ್‌ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಅಂತ ತೋರಿಸಲಾ. ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸ್ಲಾ? ಎಂದು ಮತ್ತೆ ಏಕವಚನದಲ್ಲಿ ವಿಶ್ವನಾಥ್ ಗೆ ಸಿದ್ದರಾಮಯ್ಯ ಕಿಡಿಕಾರಿದರು.
ನನ್ನ ಹಳ್ಳಿ ಭಾಷೆ, ಅದು ಏಕವಚನ ಅನ್ನಿಸುತ್ತದೆ.ನಾನು ಉದ್ದೇಶಪೂರ್ವಕವಾಗಿ ಏಕವಚನ ಬಳಸೋಲ್ಲ.ಅದು ತಾನಾಗಿಯೇ ಬರೋದು ಎಂದು ಸಮರ್ಥಿಸಿಕೊಂಡರು.
key words : God-singularly-called-There-no-need-learn-lesson-Vishwanath-Former CM-Siddaramaiah