ಮೈಸೂರು,ಏಪ್ರಿಲ್, 4,2021(www.justkannada.in): ಮೈಸೂರಿನ ಎಂ.ಟೆಕ್ ವಿದ್ಯಾರ್ಥಿನಿ ತನುಷಾ ನಂದೀಶ್ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪಡೆದರು.
ಮೈಸೂರಿನ ಜಿಟಿಟಿಸಿ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ತನುಷಾ ನಂದೀಶ್ ಅವರು ಎರಡು ಚಿನ್ನದ ಪದಕ ಪಡೆದಿದ್ದು ಬೆಳಗಾವಿಯಲ್ಲಿ ನಡೆದ ವಿಟಿಯುನ 20ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಮಗಳ ಸಾಧನೆಗೆ ಪೋಷಕರ ಹರ್ಷ ವ್ಯಕ್ತಪಡಿಸಿದ್ದು ಸಿಹಿ ಹಂಚಿ ಕುಟುಂಬ ವರ್ಗ ಸಂಭ್ರಮಿಸಿದರು. ಚಿನ್ನದ ಪದಕ ಪಡೆದ ಬಗ್ಗೆ ವಿದ್ಯಾರ್ಥಿನಿ ತನುಷಾ ನಂದೀಶ್ ಸಂತಸ ಹಂಚಿಕೊಂಡರು. ಈ ವೇಳೆ ತನಿಷಾ ನಂದೀಶ್ ಮೆಟೀರಿಯಲ್ಸ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡುವ ಬಯಕೆ ವ್ಯಕ್ತಪಡಿಸಿದರು.
Key words: Gold medal – M.Tech -student -Mysore