ಸ್ವರ್ಣ ಸಿಂಹಾಸನ ಜೋಡಣೆ ಪೂರ್ಣ, ನಾಳೆಯಿಂದ ಸಾರ್ವಜನಿಕ ದರ್ಶನಕ್ಕೆ ಮುಕ್ತ.

The arrangement of the golden throne is complete, open to public viewing from tomorrow.

 

ಮೈಸೂರು, ಸೆ.27,2024: (www.justkannada.in news) ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆಯ ರತ್ನ ಖಚಿತ ಸಿಂಹಾಸನದ ಜೋಡಣಾ ಕಾರ್ಯ ಇಂದು ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಿಂಹಾಸನ ನಾಳೆಯಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ.

ಮೈಸೂರು ಅರಮನೆ ಸಿಂಹಾಸನ ಭಾರತದ ಪ್ರಮುಖ ಐತಿಹಾಸಿಕ ಧಾರ್ಮಿಕ ಪೀಠವಾಗಿದೆ. ಇದನ್ನು ಸ್ವರ್ಣ ಸಿಂಹಾಸನ (Golden Throne) ಎಂದು ಕರೆಯಲಾಗುತ್ತದೆ, ಇದು ಚಾಮರಾಜೇಂದ್ರ ಒಡೆಯರ್‌ ರಾಜವಂಶದ ಪ್ರತಿ ವರ್ಷ ದಸರಾ ಉತ್ಸವದ ವೇಳೆ ವಿಶೇಷವಾಗಿ ಜೋಡಣೆ ಮಾಡಲಾಗುತ್ತದೆ. ಸಿಂಹಾಸನವು ಸಾಮಾನ್ಯವಾಗಿ ಅರಮನೆ ಮೈದಾನದಲ್ಲಿನ ದರ್ಬಾರ್ ಹಾಲ್ನಲ್ಲಿ ಇಡಲಾಗುತ್ತದೆ, ಇದು ವಿಶೇಷವಾಗಿ ಅದನ್ನು ಪ್ರದರ್ಶಿಸಲು ವಿನ್ಯಾಸಗೊಂಡಿದೆ.

ಸಿಂಹಾಸನವನ್ನು ಮೂರು ಮುಖ್ಯ ಭಾಗಗಳಲ್ಲಿ ವಿಭಜಿಸಲಾಗುತ್ತದೆ.

ಅಧೋಭಾಗ: ಸಿಂಹಾಸನದ ತಳಭಾಗವು ಸೂಕ್ತ ಗಾತ್ರದಲ್ಲಿ ಸರಿಯಾಗಿ ನೆಲೆಗೊಳ್ಳುತ್ತದೆ.

ಮಧ್ಯಭಾಗ: ಸಿಂಹಾಸನದ ಸಣ್ಣ ಬಾಗಗಳನ್ನು ಕಲೆಹಾಕಿ, ಅದನ್ನು ನಯಗೊಳಿಸಲಾಗುತ್ತದೆ.

ಮೇಲ್ಬಾಗ: ಮುಖ್ಯ ಸಿಂಹಾಸನದ ಮೇಲ್ಭಾಗವನ್ನು ಅಲಂಕಾರಿಕವಾಗಿ ಹೊಂದಿಸಲಾಗುತ್ತದೆ.

ಸ್ವರ್ಣ ಅಲಂಕಾರ: ಸಿಂಹಾಸನವು ನಿಖರವಾದ ಚಿನ್ನದ ಅಲಂಕಾರದಿಂದ ಹೊಳೆಯುತ್ತದೆ. ಇದರಲ್ಲಿ ಹಸ್ತಕಾರಿಗಳಿಂದ ತಯಾರಿಸಲಾದ ವೈವಿಧ್ಯಮಯ ಶಿಲ್ಪಗಳಿವೆ, ವಿಶೇಷವಾಗಿ ಸಿಂಹಗಳ ಆಕೃತಿಗಳು.

ಆಚಾರಗಳು:

ದಸರಾ ಸಮಯದಲ್ಲಿ ಮೈಸೂರು ರಾಜಕುಟುಂಬದ ಸದಸ್ಯರು ಧಾರ್ಮಿಕ ಪೂಜಾ ಕರ್ಮಗಳನ್ನು ನೆರವೇರಿಸುತ್ತಾರೆ. ಇಂದು ಬೆಳಗ್ಗೆ ೭.೩೦ ಕ್ಕೆ ಹೋಮದ ಮೂಲಕ ಧಾರ್ಮಿಕ ಕಾರ್ಯಗಳು ಆರಂಭಗೊಂಡವು. ಬಳಿಕ ಮಧ್ಯಾಹ್ನ ೧.೩೦ ರ ವೇಳೆಗೆ ಸಿಂಹಾಸನದ ಜೋಡಣಾ ಕಾರ್ಯ ಸಂಪೂರ್ಣಗೊಂಡಿತು.

ಸಿಂಹಾಸನದ ಜೋಡಣಾ ಕಾರ್ಯವು ರಾಜವಶಂಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಈ ವೇಳೆ ಅರಮನೆ ದೇವಸ್ಥಾನದ ಪುರೋಹಿತರು ಹಾಗೂ ಅರಮನೆ ಸಿಬ್ಬಂದಿ ವರ್ಗ ಹಾಜರಿದ್ದರು. ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರು ಸಹ ಈ ವೇಳೆ ಉಪಸ್ಥಿತರಿದ್ದರು.

key words: The arrangement of, the golden throne, is complete, open to public, viewing from tomorrow, mysore, palacae