ಬೆಂಗಳೂರು, ಡಿಸೆಂಬರ್ 26, 2021 (www.justkannada.in): ಉತ್ತಮ ಆಡಳಿತ ಸೂಚ್ಯಂಕದಲ್ಲಿ 3ರಿಂದ 6ನೇ ಸ್ಥಾನಕ್ಕೆ ಕರ್ನಾಟಕ ಕುಸಿದಿದೆ.
ಹೌದು. ಆಡಳಿತ ಸೂಚ್ಯಂಕ 2021 ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸಮಗ್ರ ಪಟ್ಟಿಯಲ್ಲಿ ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 5.109 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ.
ಗುಜರಾತ್ (5.662), ಮಹಾರಾಷ್ಟ್ರ(5.425) ಹಾಗೂ ಗೋವಾ(5.348) ರಾಜ್ಯಗಳು ಮೊದಲ 3 ಸ್ಥಾನ ಪಡೆದುಕೊಂಡಿವೆ.
2019ರಲ್ಲಿ ಸಮಗ್ರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಬಿಡುಗಡೆಯಾದ ವರದಿಯಲ್ಲಿ ಶೇ.0.2ರಷ್ಟು ಏರಿಕೆ ಕಂಡಿದ್ದರೂ, ಒಟ್ಟಾರೆ 3 ಸ್ಥಾನ ಕುಸಿತ ಕಂಡು 6ನೇ ಸ್ಥಾನ ಪಡೆದಿದೆ.
ಒಟ್ಟು 10 ವಲಯಗಳಲ್ಲಿನ 58 ವಿಷಯಗಳನ್ನು ಆಧರಿಸಿ ಕೇಂದ್ರ ಸರ್ಕಾರವು ಈ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ.