ನವದೆಹಲಿ,ಫೆಬ್ರವರಿ,1,2021(www.justkannada.in) ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ಗುಡ್ ನ್ಯೂಸ್ ನೀಡಲಾಗಿದೆ. ಗ್ರಾಹಕರ ಬಂಡವಾಳದ ಭದ್ರತಾ ವಿಮೆಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಠೇವಣಿದಾರರ ಹಣಕ್ಕೆ ಸುರಕ್ಷತೆ ನೀಡುವ ಭರವಸೆಯನ್ನು. ಸರ್ಕಾರಿ ಬ್ಯಾಂಕ್ಗಳಿಗೆ 20,000 ಕೋಟಿ ಹೊಸ ಬಂಡವಾಳ ಮರುಪೂರಣವನ್ನು ಇಂದಿನ ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ.
ಸರ್ಕಾರಿ ಬ್ಯಾಂಕ್ಗಳಿಗೆ 20,000 ಕೋಟಿ ಹೊಸ ಬಂಡವಾಳ ಮರುಪೂರಣ ಮಾಡಲಾಗುತ್ತದೆ ಎಂಬುದಾಗಿ ಘೋಷಿಸುವ ಮೂಲಕ, ಬ್ಯಾಂಕ್ ಠೇವಣಿದಾರರಿಗೆ ಬಿಗ್ ರಿಲೀಫ್ ನೀಡಿದ್ದಲ್ಲದೇ, 1 ಲಕ್ಷ ಇದ್ದ ಠೇವಣಿ ಹಣವನ್ನು 5 ಲಕ್ಷದವರೆಗೆ ಏರಿಕೆ ಮಾಡಿರುವುದಾಗಿ ಘೋಷಿಸಿದರು.
ಇನ್ನು ಏರ್ ಇಂಡಿಯಾ, ಐಡಿಬಿಐಎ ಬ್ಯಾಂಕ್, ಬಿಇಎಂಎಲ್, ಶಿಪ್ಪಿಂಗ್ ಕಾರ್ಪೋರೇಶನ್ ನಲ್ಲಿ ನ ಹೂಡಿಕೆ ಹಿಂತೆಗೆತ ಯಶಸ್ವಿ. ಕಾಲಮಿತಿಯಲ್ಲಿ ನಷ್ಟದಲ್ಲಿರುವ ಕೈಗಾರಿಕೆ ಕಂಪನಿಗಳನ್ನು ಮುಚ್ಚಲಿದ್ದೇವೆ. ಎಂಎಸ್ ಎಂಇಗಳಿಗೆ ನೆರವು ನೀಡಲು ಎಐ, ಎಂಎಲ್ ತಂತ್ರಜ್ಞಾನ ಬಳಸಲಿದ್ದೇವೆ ಎಂದು ತಿಳಿಸಿದರು.
Key words: Good news – budget -bank depositors.