ನವದಹೆಲಿ,ನವೆಂಬರ್,13,2020(www.justkannada.in): ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರ ಧನ ಬಿಡುಗಡೆಗೆ ಒಪ್ಪಿಗೆ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕ ಸೇರಿ 6 ರಾಜ್ಯಗಳಿಗೆ ಒಟ್ಟು 4,382 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಸಿಕ್ಕಿಂ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಒಟ್ಟು 4,382 ಕೋಟಿ ರೂ. ಮಂಜೂರು ಮಾಡಿದೆ.
ಪ್ರವಾಹ, ಮುಂಗಾರು ಮಳೆ ಅನಾಹುತ, ಭೂಕುಸಿತ ಹಿನ್ನೆಲೆ ಕರ್ನಾಟಕಕ್ಕೆ 577 ಕೋಟಿ ರೂ ಪರಿಹಾರ ಬಿಡುಗಡೆಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಿಲಾಗಿದೆ. ಅಂಫಾನ್ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳಕ್ಕೆ 2,708 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
Key words: Good news – central government- Natural Disaster- Relief -Grant – 6 States -Karnataka