ಬೆಂಗಳೂರು. ನವೆಂಬರ್ 15, 2022 (www.justkannada.in): ದೇಶದ ಲಕ್ಷಾಂತರ ಕೇಂದ್ರ ಉದ್ಯೋಗಿಗಳಿಗೆ ಗುಡ್ ನ್ಯೂಸ್ ! ಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. 2023ರ ಆರಂಭದಲ್ಲಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಸಿಗಲಿದೆ.
ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಜನವರಿಯಲ್ಲೇ ಸರ್ಕಾರ ಡಿಎ ಹೆಚ್ಚಳ ಮಾಡಲಿದೆ ಎನ್ನಲಾಗಿದೆ.
ಪ್ರಸ್ತುತ ನೌಕರರ ಡಿಎ ಶೇ 38ರಷ್ಟಿದೆ. ಉದ್ಯೋಗಿಗಳ ಡಿಎ ಶೇ.4ರಷ್ಟು ಹೆಚ್ಚಾದರೆ ಅದು ಶೇ.42ಕ್ಕೆ ಏರಿಕೆಯಾಗಲಿದೆ. ಮೂಲ ವೇತನ ಮಾಸಿಕ ರೂ.720ರಿಂದ ರೂ.2276ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
2023ರ ಜನವರಿಯಿಂದ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮಾರ್ಚ್ 2023ರೊಳಗೆ ಪ್ರಕಟಿಸಲು ಅವಕಾಶವಿದೆ.