ಮೈಸೂರು: ಕೊರೊನಾ ಕಡಿಮೆ ಆಗುತ್ತಿರುವ ಬೆನ್ನಲ್ಲೇ ಮೈಸೂರಿಗರಿಗೆ ಸಿಹಿ ಸುದ್ದಿ ಬಂದಿದೆ. ನಗರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆದಿದೆ.
ಪ್ಲಾಟ್ ಫಾರಂಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗುತ್ತಿದೆ. ನಗರ ಬಸ್ ನಿಲ್ದಾಣಕ್ಕೆ ಎಂಟ್ರಿ ಆಗುತ್ತಿದ್ದಂತೆ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ. ಬಸ್ ನಿಲ್ದಾಣದಲ್ಲಿ ಸಿಂಗಲ್ ಎಂಟ್ರಿ, ಸಿಂಗಲ್ ಎಕ್ಸಿಟ್.
ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದಿಂದ ಸೂಚನೆ ಕೊಡುತ್ತಿದ್ದಂತೆ ನಗರದಲ್ಲಿ ಬಸ್ ಸಂಚಾರ. ಡಿಮ್ಯಾಂಡ್ ಇರುವ ಕಡೆ ಬಸ್ ಸಂಚಾರ ನಡೆಯಲಿದೆ.
ಚಾಲಕರು, ನಿರ್ವಾಹಕರಿಗೆ ಪ್ರತಿನಿತ್ಯ ಆರೋಗ್ಯ ತಪಾಸಣೆ. ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಹೆಲ್ತ್ ವರ್ಕರ್ಸ್. ಪ್ರತಿಯೊಬ್ಬ ಪ್ರಯಾಣಿಕರಿಗೂ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ಮೂಲಕ ಎಂಟ್ರಿ ನೀಡಲಾಗುತ್ತದೆ.
ಪ್ರವೇಶ ದ್ವಾರದಲ್ಲಿ ಪ್ರಯಾಣಿಕರಿಗಾಗಿ ಸ್ವಯಂಚಾಲಿತ ಸ್ಯಾನಿಟೈಸಿಂಗ್ ಮಷಿನ್ ಅಳವಡಿಕೆ. ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಯವಾದರೆ ನೋ ಎಂಟ್ರಿ. ಒಂದು ಬಸ್ನಲ್ಲಿ ೨೦ ರಿಂದ ೩೦ ಜನರಿಗಷ್ಟೇ ಪ್ರಯಾಣಿಸಲು ಅವಕಾಶ.
ಜನರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಚಾರ ನಡೆಯಲಿದೆ. ಈಗಾಗಲೇ ನಗರ ಬಸ್ ನಿಲ್ದಾಣದ ಎಲ್ಲಾ ಪ್ರವೇಶ ದ್ವಾರಗಳನ್ನ ಬಂದ್ ಮಾಡಲಾಗಿದೆ. ಈಗ ಒಂದೇ ಕಡೆ ಎಂಟ್ರಿ ಮತ್ತು ಒಂದೇ ಕಡೆ ಎಕ್ಸಿಟ್ ಮಾಡಿದ್ದೆವೆ. ಸರ್ಕಾರದಿಂದ ಸೂಚನೆ ಬಂದಾಕ್ಷಣ ಬಸ್ ಸಂಚಾರ ಆರಂಭವಾಗಲಿದೆ ಎಂದ ನಗರ ಸಾರಿಗೆ ಉಪ ವಿಭಾಗ ನಿಯಂತ್ರಣಾಧಿಕಾರಿ ಎಸ್.ಪಿ ನಾಗರಾಜು ಹೇಳಿದ್ದಾರೆ.