ಬೆಂಗಳೂರು, ಏಪ್ರಿಲ್ 06, 2021 (www.justkannada.in):
ನಟ ರವಿಚಂದ್ರನ್ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಾರೆ!
ಹೌದು, ಅಭಿಮಾನಿಗಳ ನೆಚ್ಚಿನ ರವಿಮಾಮಾ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಯೂಟ್ಯೂಬ್ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ರವಿಚಂದ್ರನ್ ತೆರೆಯಲಿದ್ದಾರೆ.
ಏ.13ರಂದು ಯುಗಾದಿ ಹಬ್ಬದ ಪ್ರಯುಕ್ತ ಅವರು ಸೋಶಿಯಲ್ ಮೀಡಿಯಾ ಖಾತೆಗಳನ್ನು ತೆರೆಯಲಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಅನೇಕ ಹೊಸ ಟ್ರೆಂಡ್ಗಳನ್ನು ಸೆಟ್ ಮಾಡಿದ ರವಿಚಂದ್ರನ್ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಕೆಲವರು ನಕಲಿ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಇದೀಗ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳನ್ನು ರವಿಚಂದ್ರನ್ ಬಳಸಲಿದ್ದಾರೆ.