ಬೆಂಗಳೂರು, ಅಕ್ಟೋಬರ್ 16, 2021 (www.justkannada.in): ಟ್ವೆಂಟಿ-20 ವಿಶ್ವಕಪ್ ನಂತರ ಭಾರತೀಯ ಸೀನಿಯರ್ ಕ್ರಿಕೆಟ್ ತಂಡದ ಕೋಚ್ ಆಗಲು ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ಕಾರ್ಯದರ್ಶಿ ಜಯ್ ಶಾ ದುಬೈನಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದ ವೇಳೆ ದ್ರಾವಿಡ್ ಅವರನ್ನು ಭೇಟಿಯಾಗಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಮನವೊಲಿಸಿದ್ದರು ಎನ್ನಲಾಗಿದೆ.
ದ್ರಾವಿಡ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗುವುದನ್ನು ದೃಢ ಪಡಿಸಿದ್ದಾರೆ. ದ್ರಾವಿಡ್ ಅವರು ಶೀಘ್ರದಲ್ಲೇ ಎನ್ಸಿಎ ಮುಖ್ಯಸ್ಥ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದ್ರಾವಿಡ್ ಆಪ್ತ ಪರಾಸ್ ಮಾಂಬ್ರೆ ಅವರನ್ನು ಬೌಲಿಂಗ್ ತರಬೇತುದಾರರನ್ನಾಗಿ ನೇಮಿಸಲಾಗುವುದು ಎಂದು ತಿಳಿದುಬಂದಿದೆ. ವಿಕ್ರಮ್ ರಾಥೋರ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.