ನವದೆಹಲಿ, ಅಕ್ಟೋಬರ್,4,2023(www.justkannada.in): ದಸರಾ ಹಬ್ಬದ ಸಮೀಪದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಲ್ ಪಿಜಿ ಸಿಲಿಂಡರ್ ಸಬ್ಸಿಡಿಯನ್ನ 200 ರಿಂದ 300 ರೂಪಾಯಿಗೆ ಹೆಚ್ಚಳ ಮಾಡಿದೆ.
ಕೇಂದ್ರ ಸಚಿವ ಸಂಪುಟ ಸಭೆ ನಂತರ ಮಾತನಾಡಿದ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈಗ 200 ರೂ.ಗಳ ಸಬ್ಸಿಡಿಯನ್ನ ಮತ್ತೆ 100 ರೂಪಾಯಿ ಹೆಚ್ಚಿಸಲಾಗಿದ್ದು, ಈಗ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಉಜ್ವಲ ಯೋಜನೆ ಮಹಿಳೆಯರ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದ್ದರಿಂದ, ಈಗ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ. ಕೆಲ ತಿಂಗಳ ಹಿಂದಷ್ಟೇ ಉಜ್ವಲ್ ಯೋಜನೆಯ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ದರವನ್ನು 200ರೂ.ಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿ ಸಿಹಿಸುದ್ದಿ ನೀಡಿತ್ತು. ಇಂದು ಮತ್ತೆ 200 ರೂಗಳಿಂದ 300 ರೂ.ಗಳಿಗೆ ಹೆಚ್ಚಳ ಮಾಡಿ ಭರ್ಜರಿ ಗುಡ್ ನ್ಯೂಸ್ ಅನ್ನು ಉಜ್ವಲ್ ಯೋಜನೆ ಫಲಾನುಭವಿಗಳಿಗೆ ನೀಡಿದೆ.
ಪಿಎಂ ಉಜ್ವಲ ಯೋಜನೆ ಹೊಂದಿರುವವರಿಗೆ ಸರ್ಕಾರ ಈ ಹಿಂದೆಯೇ 200 ರೂನಷ್ಟು ಸಬ್ಸಿಡಿ ಕೊಟ್ಟಿದೆ. ಈಗ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 300 ರೂ ಸಬ್ಸಿಡಿ ಸಿಗುತ್ತದೆ.
Key words: Good news – Ujjwala Yojana –beneficiaries-Subsidy rate -hiked – Rs.300.