ಮೈಸೂರು,ಜು,27,2019(www.justkannada.in): ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು ಇದುವರೆಗೆ ವಾರದ ನಾಲ್ಕು ದಿನ ಮಾತ್ರ ಇದ್ದ ಮೆಮು ರೈಲ್ವೆ ಸೇವೆಯನ್ನ ವಿಸ್ತರಣೆ ಮಾಡಲಾಗಿದೆ.
ಹೆಚ್ಚುವರಿ ಸೇವೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್, ಡಿಆರ್ಎಂ ಅಪರ್ಣಾ ಗರ್ಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಇದುವರೆಗೆ ವಾರದ ನಾಲ್ಕು ದಿನ ಮಾತ್ರ ಇದ್ದ ಮೆಮು ರೈಲು ಸೇವೆ ಸೋಮವಾರದಿಂದ ಶನಿವಾರದವರೆಗೆ ವಾರದ 6 ದಿನವೂ ಸಿಗಲಿದೆ. ಕೇವಲ 30 ರೂ.ಗಳಲ್ಲೇ ಮೆಮು ರೈಲಿನಲ್ಲಿ ಮೈಸೂರು- ಬೆಂಗಳೂರು ನಡುವಿನ ಪ್ರಯಾಣ ಮಾಡಬಹುದಾಗಿದೆ. ಮೆಮು ರೈಲು ವಿದ್ಯುಚ್ಛಕ್ತಿಯಿಂದ ಚಲಿಸುತ್ತದೆ.
Key words: goodnews-Mysore -Railway –Passengers-Extension – Memu Railway- Service.