ಮೈಸೂರು, ಜೂನ್ 3, 2021 (www.justkannada.in): ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ, ಅತೀ ಹೆಚ್ಚಿನ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಗಳಿಗೆ ಭಾಜನವಾಗಿರುವ ‘ಕನ್ನಡ,’ ಭಾರತದ ಅತ್ಯಂತ ‘ಅಸಹ್ಯ’ವಾದ ಭಾಷೆ ಎನ್ನುತ್ತಿದೆಯೇ ಗೂಗಲ್?! ಹೌದು ಗೂಗಲ್ನಲ್ಲಿ ನೀವು ‘which is the ugliest language in India’ ಎಂದು ಟೈಪ್ ಮಾಡಿದರೆ ‘ Kannada’ ಎಂದು ತೋರಿಸುತ್ತಿದೆ.
ಗೂಗಲ್, ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಆಗಿದ್ದು, ವಿಶ್ವದ ಮೂಲೆಮೂಲೆಯಲ್ಲೂ ಎಲ್ಲರಿಗೂ ಗೂಗಲ್ ಬಗ್ಗೆ ತಿಳಿದಿದೆ. ಆದರೆ ‘ಕನ್ನಡ’ ಅತ್ಯಂತ ಕುರೂಪವಾದ ಭಾಷೆ ಎಂದು ತೋರಿಸುತ್ತಿರುವುದು ಕರ್ನಾಟಕದ ಜನರನ್ನು ಆಕ್ರೋಶಗೊಳಿಸಿದೆ. ಬಹುಶಃ ಇದು ಯಾರೋ ಕಿಡಿಗೇಡಿಗಳ ಕೆಲಸವೇ ಇರಬಹುದು. ಆದರೆ ಇದನ್ನು ಯಾರ ಗಮನಕ್ಕೂ ತರದೆ ಹೀಗೆ ಬಿಟ್ಟರೆ ಕನ್ನಡಕ್ಕೆ ಆಗುವಂತಹ ಅಪಮಾನ ಇಡೀ ರಾಜ್ಯದ ಜನರಿಗೆ ಆಗುವಂತಹ ಅಪಮಾನವೇ ಸರಿ. ಹಾಗಾಗಿ, ಗೂಗಲ್ ಬಳಸುವ ಪ್ರತಿಯೊಬ್ಬ ಕನ್ನಡಿಗನೂ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಬೇಕಿದೆ. ಸಂಬಂಧಪಟ್ಟ ಪ್ರಾಧಿಕಾರ ಇದನ್ನು ಗಮನಿಸಿ ಕೂಡಲೇ ಸರಿಪಡಿಸುವ ಕ್ರಮಕೈಗೊಳ್ಳುವಂತೆ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಜನ ನಂಬಿದ್ದಾರೆ.
ಏನು ಮಾಡಬೇಕು…?
ಗೂಗಲ್ ನಲ್ಲಿ ಫೀಡ್ ಬ್ಯಾಕ್ ಆಪ್ಷನ್ ನ ಕ್ಲಿಕ್ ಮಾಡಿ, ನಂತರ ಮೂರನೇ ಆಪ್ಷನ್ ನ ಸೆಲೆಕ್ಟ್ ಮಾಡಿ. ಕಾಮೆಂಟ್ಸ್ ಅಥವಾ ಸಜೆಷನ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಯನ್ನ ಬರೆಯಿರಿ. ಆ ಮೂಲಕ ಗೂಗಲ್ ನಲ್ಲಿ ಕನ್ನಡ ಭಾಷೆಗಾಗುತ್ತಿರುವ ಅಪಮಾನವನ್ನು ತಡೆಯಲು ಮುಂದಾಗಿ.
Key words: google-kannada- ugliest language-send- feedback-support kannada