ಕೊಲೊಂಬೊ, ನವೆಂಬರ್ 17, 2019 (www.justkannada.in): ಗೋತಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿದ್ದಾರೆ.
ದಿ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಇಳಂ (ಎಲ್ಟಿಟಿಇ) ಪ್ರತ್ಯೇಕವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋತಬಯ ರಾಜಪಕ್ಸೆ ಶ್ರೀಲಂಕಾ ಅಧ್ಯಕ್ಷರಾಗುತ್ತಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಹಾಗೂ ಕೌಟುಂಬಿಕವಾಗಿ ‘ಟರ್ಮಿನೇಟರ್’ ಎಂದೇ ಪ್ರಖ್ಯಾತರಾಗಿರುವ ರಾಜಪಕ್ಸೆ, ಚುನಾವಣೆಯಲ್ಲಿ ಶೇ.53-54 ಮತವನ್ನು ಗಳಿಸಿರುವುದಾಗಿ ಅವರ ಮಾಧ್ಯಮ ವಕ್ತಾರ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಪಕ್ಸೆ ಅವರ ಪ್ರಮುಖ ಎದುರಾಳಿ ಆಡಳಿತಾರೂಢ ಸಂಯುಕ್ತ ರಾಷ್ಟ್ರೀಯ ಪಕ್ಷದ (ಯುಎನ್ಪಿ) ಹಾಗೂ ನವಪ್ರಜಾಸತ್ತಾತ್ಮಕ ರಂಗದ (ಎನ್ಡಿಎಫ್) ಉಪನಾಯಕ ಸಜಿತ್ ಪ್ರೇಮದಾಸ ಸೋಲನುಭವಿಸಿದ್ದಾರೆ.