ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಯೋಜನೆ ಕೈ ಬಿಟ್ಟ ಸರ್ಕಾರ.

ಮೈಸೂರು,ಜುಲೈ,6,2022(www.justkannada.in): ಸ್ಥಳೀಯರು, ಪರಿಸರವಾದಿಗಳ ವಿರೋಧಕ್ಕೆ‌ ಮಣಿದ ರಾಜ್ಯ ಸರ್ಕಾರ ಇದೀಗ ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಯೋಜನೆಯನ್ನ ಕೈಬಿಟ್ಟಿದೆ.

ರೋಪ್‌ ವೇ ಯೋಜನೆಯನ್ನ ಪ್ರವಾಸೋದ್ಯಮ ಇಲಾಖೆ ಕೈ ಬಿಟ್ಟಿದ್ದು, ಪ್ರವಾಸೋದ್ಯಮ ಅಭಿವೃದ್ದಿ  ಕುರಿತ ಸಭೆ ಬಳಿಕ ಈ ವಿಚಾರವನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ತಿಳಿಸಿದರು. ಈ ಬಗ್ಗೆ ಮಾತನಾಡಿದ ಅವರು, ಭಕ್ತರ, ಸ್ಥಳಿಯರ ಭಾವನೆಗಳಿಗಾಗಿ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಯೋಜನೆ ಕೈಬಿಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಾಗಿ ಬರ್ತಾರೆ. ಮೆಟ್ಟಿಲುಗಳ ಜೊತೆಗೆ ಹಲವಾರು ಕಡೆ ಬೆಟ್ಟಕ್ಕೆ ದಾರಿ ಇದೆ. ಹೆಚ್ಚು ಬಸ್‌ ಸೌಲಭ್ಯ ಇರುವುದರಿಂದ ಕೈ ಬಿಡಲಾಗಿದೆ‌. ಪ್ರವಾಸೋದ್ಯಮ ಅಭಿವೃದ್ಧಿಗಿಂತ ದೇವಾಲಯದ ಪ್ರಾಧಿಕಾರ ರಚನೆಗೆ ಚರ್ಚೆ ನಡೆಯಿತು. ಚಾಮುಂಡೇಶ್ವರಿ ದೇವಾಲಯದ ಪ್ರಾಧಿಕಾರದ ಬಗ್ಗೆ ಸಿಎಂ‌ ಜೊತೆ ಚರ್ಚೆ ಮಾಡುತ್ತೇನೆ. ದೇವಾಲಯದ ಸುತ್ತ ಅಂಗಡಿಗಳ ಬದಲಿ ಸ್ಥಳದ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದರು.

ನಂದಿ ಮಾರ್ಗದ ರಸ್ತೆ ಮರು ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಭೂ ಕುಸಿತವಾದ ರಸ್ತೆಯ ನಿರ್ಮಾಣಕ್ಕೆ 10 ಕೋಟಿ ಬಿಡುಗಡೆಯಾಗಿದೆ. ಭೂ ಕುಸಿತದ ಶಾಶ್ವತ ಪರಿಹಾರಕ್ಕಾಗಿ ಯಾವ ತಂತ್ರಜ್ಞಾನದಲ್ಲಿ ನಿರ್ಮಿಸಬೇಕೆಂದು ಪಿಡಬ್ಲ್ಯೂಡಿ ಇಲಾಖೆ ಮಾಹಿತಿ ಪಡೆದಿದೆ.ಶೀಘ್ರದಲ್ಲೇ ಕುಸಿತವಾದ ರಸ್ತೆಯನ್ನ ಮರು ನಿರ್ಮಾಣ ಮಾಡ್ತೀವಿ ಎಂದರು.

ಚಾಮುಂಡಿ ಬೆಟ್ಟದ ಮೇಲಿನ‌ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.  ಚಾಮುಂಡಿ ಬೆಟ್ಟದ ಮೇಲೆ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಬೆಟ್ಟದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆಯಿದೆ. ನಾಲ್ಕೈದು ಎಕರೆ ಸರ್ಕಾರಿ ಜಾಗ ಗುರ್ತಿಸಿ, ಬೆಟ್ಟದ ಮೇಲಿನ ನಿವಾಸಿಗಳು ಅಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

Key words: government – abandoned-ropeway -construction -project -Chamundi Hill.

ENGLISH SUMMARY…

Govt. drops rope way project to Chamundi hill in Mysuru
Mysuru, July 6, 2022 (www.justkannada.in): Yielding to the pressure by locals and environmentalists, the State Government has dropped the plan of implementing rope way to the Chamundi hill in Mysuru.
The Tourism Department of the Government of Karnataka has dropped the rope way project following a meeting held today, according to Mysuru District In-charge Minister S.T. Somashekar. “Respecting the feelings of the devotees and the locals, we have dropped the idea of constructing the rope way to the Chamundi hills. Majority of the visitors to the hills are devotees, than tourists. There are several routes to reach the top apart from steps. There are also enough bus facilities. Hence, we have dropped the project. In today’s meeting the discussion was more about forming the authority rather than tourism development. I will discuss the formation of the Chamundi Temple Authority with the Chief Minister. Discussion on finding a suitable place to the shops that are running near the temple will be held in the next meeting,” he informed.
In his reply to the reconstruction of the Nandi road that sunk due to rains, the Minister informed that a sum of Rs. 10 crore is released to reconstruct the road. “The PWD has collected information required for permanent reconstruction of the sunken road. It will be reconstructed soon,” he informed.
Further he also informed that the district administration is contemplating on shifting the residents atop the hill to some other place. “Nobody will be allowed to construct residences atop the hill from now onwards. We are thinking of shifting the residents there in order to reduce the pressure. Efforts will be made to identify four or five acres of government land and shift the residents atop the hill there,” he added.
Keywords: Mysuru District In-charge Minister/ S.T. Somashekar/ Chamundi hill/ rope way/ dropped