ಬೆಂಗಳೂರು,ಜನವರಿ,11,2021(www.justkannada.in) : ಕೃಷಿ ಕಾಯ್ದೆ ಕೇಂದ್ರ ಸರ್ಕಾರ ಏಕೆ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದೆ ಎಂದು ಅರ್ಥವಾಗುತ್ತಿಲ್ಲ. ಸರ್ಕಾರ ಕಾಯಿದೆ ತಡೆಹಿಡಿಯದಿದ್ದರೇ, ನ್ಯಾಯಾಲಯವೇ ಕಾಯಿದೆಗಳಿಗೆ ತಡೆಯಾಜ್ಞೆ ನೀಡಲಿದೆ ಎಂದು ಸುಪ್ರೀ ಕೋರ್ಟ್ ನ ಮುಖ್ಯ ನಾಯ್ಯಾಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಸುಪ್ರೀಂ ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಸರ್ಕಾರ ಅನುಚ್ಛೇದಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತದೆ. ಆದರೆ, ರೈತರು ಇಡೀ ಕಾನೂನನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ಪದೇ, ಪದೇ ಯಾಕೆ ವಿಫಲವಾಗುತ್ತಿದೆ ಎಂಬುದನ್ನು ನಾವು ವರದಿಗಳಿಂದ ಅರ್ಥ ಮಾಡಿಕೊಂಡಿದ್ದೇವೆ.
ಹೀಗಾಗಿ, ನಾವು ಕೇಂದ್ರದಿಂದ ನೇಮಕಗೊಂಡ ಸಮಿತಿಯ ಯಾವುದೇ ನಿರ್ಧಾರ ಕೈಗೊಳ್ಳುವ ವರೆಗೆ ಹಾಲಿ ಕಾನೂನು ಅನುಷ್ಠಾನಕ್ಕೆ ತಡೆ ನೀಡುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ತ್ರಿಸದಸ್ಯ ಪೀಠ ತಿಳಿಸಿದೆ.ಪ್ರತಿಭಟನೆಯಲ್ಲಿ ಹಿರಿಯ ನಾಗಕರಿರು ಮತ್ತು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂದು ನ್ಯಾಯಾಲಯಕ್ಕೂ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ವಿರುದ್ಧ ಅಸಮಾಧಾನವ್ಯಕ್ತಪಡಿಸಿದೆ.
ENGLISH SUMMARY…
“If Govt. won’t, we will stay new agriculture bill”- SC
Bengaluru, Jan. 11, 2021 (www.justkannada.in): The Hon’ble Supreme Court has expressed his dissatisfaction on the Central Government over its adamant attitude on the agriculture bills. The Supreme Court bench led by Chief Justice S.A. Bobde has said that if the government won’t hold the new agriculture policy then the SC will stay.
The government is interested to discuss only to discuss articles, whereas the farmers are demanding to withdraw the entire policy. Through reports, we have understood why the discussion attempts between the government and the farmers are failing repeatedly. Therefore, we are issuing stay orders to implement the policy till the Committee appointed by the Govt. of India arrives at a decision, said the three-member SC bench.
Keywords: SC bench/ Stay/ New agriculture policy/ Govt. of India
key words : Government-Agriculture-Act-Not withholding-court-itself-statutes-issue-injunction-Chief Judge S.A.Bobde