ಬೆಂಗಳೂರು,ಮೇ,29,2023(www.justkannada.in): ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಇದೀಗ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಆದೇಶ ಹೊರಡಿಸಿದೆ. ಕೆಲ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಿದ್ದರೆ, ಇನ್ನು ಕೆಲ ಸಚಿವರಿಗೆ ವಿಕಾಸಸೌಧಲ್ಲಿನ ಕೊಠಡಿಗಳನ್ನು ನೀಡಲಾಗಿದೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 335, 336, 337 ಮತ್ತು 337 ಎ, ಸಚಿವರಾದ ಡಾ ಜಿ.ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 327 ಮತ್ತು 327 ಎ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 329 ಮತ್ತು 329 ಎ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾರಿಗೆ ಯಾವ ಸಂಖ್ಯೆ ಕೊಠಡಿ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹೆಚ್.ಕೆ.ಪಾಟೀಲ್- ವಿಧಾನಸೌಧದ 314, 314A ಕೊಠಡಿ
ಕೃಷ್ಣ ಭೈರೇಗೌಡ- ವಿಧಾನಸೌಧದ 244, 245 ಕೊಠಡಿ
ಡಾ.ಹೆಚ್.ಸಿ.ಮಹದೇವಪ್ಪ- ವಿಧಾನಸೌಧದ 330, 330A ಕೊಠಡಿ
ಕೆ.ವೆಂಕಟೇಶ್- ವಿಧಾನಸೌಧದ 329, 329A ಕೊಠಡಿ
ಕೆ.ಎನ್.ರಾಜಣ್ಣ- ವಿಧಾನಸೌಧದ 339, 339A ಕೊಠಡಿ
ಶರಣಪ್ಪ ದರ್ಶನಾಪುರ-ವಿಧಾನಸೌಧದ 328, 328A ಕೊಠಡಿ
ಸಂತೋಷ್ ಲಾಡ್- ವಿಧಾನಸೌಧದ 342, 342A ಕೊಠಡಿ
ಭೈರತಿ ಸುರೇಶ್-ವಿಧಾನಸೌಧದ 316, 316A ಕೊಠಡಿ
ಬಿ.ನಾಗೇಂದ್ರ- ವಿಧಾನಸೌಧದ 343, 343A ಕೊಠಡಿ
ಲಕ್ಷ್ಮೀ ಹೆಬ್ಬಾಳ್ಕರ್- ವಿಧಾನಸೌಧದ 301, 301A ಕೊಠಡಿ
ರಹೀಂ ಖಾನ್- ವಿಕಾಸಸೌಧದ 38, 39 ಕೊಠಡಿ ಹಂಚಿಕೆ
ಡಾ.ಎಂ.ಸಿ.ಸುಧಾಕರ್- ವಿಕಾಸಸೌಧದ 344, 345 ಕೊಠಡಿ
Key words: government – allotted- rooms – new ministers.