ಬೆಂಗಳೂರು, ಆಗಸ್ಟ್ 21, 2021 (www.justkannada.in): ಬಹಳ ವಿಳಂಬದ ನಂತರ ಬೆಂಗಳೂರು-ಕೊಡಗು ಹೆದ್ದಾರಿ ಯೋಜನೆ ಸಾಕಾರಗೊಳ್ಳುವತ್ತ ಸಾಗಿದೆ. ಈ ಯೋಜನೆಯ ಸಮೀಕ್ಷೆ ಕಾರ್ಯ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಇದಾದ ನಂತರ ಭೂಮಿಯನ್ನು ವಶಪಡಿಸಿಕೊಂಡು ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ.
ಈ ಯೋಜನೆಯ ಮೊದಲನೇ ಹಂತದಡಿ ಕುಶಾಲನಗರದ ಬಳಿಯಿರುವ ಬಸವನಹಳ್ಳಿಯವರೆಗಿನ ೯೩ ಕಿ.ಮೀ. ಉದ್ದ ಹೆದ್ದಾರಿ ನಿರ್ಮಾಣ ಕಾಮಗಾರಿಗಳೂ ಒಳಗೊಂಡಿದೆ. ಶ್ರೀರಂಗಪಟ್ಟಣ ಹಾಗೂ ಹುಣಸೂರು ತಾಲ್ಲೂಕುಗಳಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಪಿರಿಯಾಪಟ್ಟಣದಲ್ಲಿ ಈ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ ಕುಶಾಲನಗರದಲ್ಲಿ ಇನ್ನೂ ಆರಂಭವಾಗಬೇಕಿದೆ.
ಈ ಹೆದ್ಚಾರಿ ನಿರ್ಮಾಣಕ್ಕೆ ರೂ.೨,೭೩೩ ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ಅಗತ್ಯ ಭೂಮಿ ವಶಪಡಿಸಿಕೊಳ್ಳಲು ರೂ.೧,೧೫೧ ಕೋಟಿಗಳ ಅಗತ್ಯವಿದೆ. ಕುಶಾಲನಗರದ ಬಳಿ ೧೨.೩೪ ಕಿ.ಮೀ.ಗಳ ಉದ್ದದ ಬೈಪಾಸ್ ರಸ್ತೆ ಹಾಗೂ ಪಿರಿಯಾಪಟ್ಟಣದ ಬಳಿ ೨೦.೨೨ ಕಿ.ಮೀ.ಗಳ ಉದ್ದದ ಬೈಪಾಸ್ ರಸ್ತೆಗಳ ನಿರ್ಮಾಣವನ್ನೂ ಈ ಯೋಜನೆಯಡಿ ಪ್ರಸ್ತಾಪಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿ 10-ಪಥಗಳ ಹೆದ್ದಾರಿಯಾಗಿದೆ (ಆರು-ಪಥಗಳ ಎಕ್ಸ್ಪ್ರೆಸ್ ವೇ ಹಾಗೂ ಇಕ್ಕೆಲಗಳಲ್ಲಿ ನಾಲ್ಕು-ಪಥಗಳ ಸರ್ವೀಸ್ ರಸ್ತೆಗಳು) ಹಾಗೂ ಮೈಸೂರು-ಮಡಿಕೇರಿ ಹೆದ್ದಾರಿಯನ್ನು ಕುಶಾಲನಗರದ ಬಳಿಯಿರುವ ಬಸವನಹಳ್ಳಿಯವರೆಗಿನ ಭಾಗವನ್ನು ಆರು-ಪಥಗಳಿಗೆ ವಿಸ್ತರಿಸಲಾಗುವುದು (ಪ್ರಸ್ತುತ ಎರಡು-ಪಥಗಳ ರಸ್ತೆಯನ್ನು ಪರಿಗಣಿಸಲಾಗಿದೆ). ಈ ಹೆದ್ದಾರಿ ಪೂರ್ಣಗೊಂಡರೆ ಬೆಂಗಳೂರು-ಮೈಸೂರು ಹಾಗೂ ಕೊಡುಗಳ ನಡುವೆ ತಡೆರಹಿತ ರಸ್ತೆ ಸಂಪರ್ಕ ಸಾಧ್ಯವಾಗುತ್ತದೆ.
ಈ ಯೋಜನೆಯ ಮತ್ತೊಂದು ಮುಖ್ಯಾಂಶವೇನೆಂದರೆ ಶ್ರೀರಂಗಪಟ್ಟಣದಿಂದ (ಬೊಮ್ಮೂರು ಅಗ್ರಹಾರದ ಬಳಿ) ಡೀವಿಯೇಷನ್ (ಗ್ರೀನ್‌ಫೀಲ್ಡ್ ರಸ್ತೆ) ಇರುವುದರಿಂದಾಗಿ ಇದು ಮೈಸೂರಿಗೆ ಹೊಸ ಬೈಪಾಸ್ ರಸ್ತೆಯನ್ನು ಸೃಷ್ಟಿಸುತ್ತದೆ. ಜೊತೆಗೆ ಈ ಯೋಜನೆಯು ಕುಶಾಲನಗರ, ಕಂಪಲಾಪುರ, ಪಿರಿಯಾಪಟ್ಟಣ ಹಾಗೂ ಹುಣಸೂರುಗಳ ಮೂಲಕವೂ ಹಾದುಹೋಗುವ ಮಾರ್ಗಗಳನ್ನೂ ಒಳಗೊಂಡಿದೆ. ಎನ್‌ಹೆಚ್‌ಎಐ ಇಂಜಿನಿಯರುಗಳ ಪ್ರಕಾರ ಈ ಯೋಜನೆಯ ಕಾಮಗಾರಿಗಳು ಕೋವಿಡ್‌ನಿಂದಾಗಿ ಸ್ವಲ್ಪ ವಿಳಂಬವಾಗಿದೆಯಂತೆ.
ಕೋವಿಡ್ ನಿಂದಾಗಿ ಸ್ವಲ್ಪ ತಡವಾದ ನಂತರ, ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ ವಿಸ್ತರಣಾ ಕಾಮಗಾರಿಗಳು ಈಗ ವೇಗ ಪಡೆದುಕೊಂಡಿದ್ದು, 2022ರ ವೇಳಗೆ ಪೂರ್ಣಗೊಳ್ಳುವ ನಿರೀಕ್ಷಿಯಿದೆ. ಈ ಯೋಜನೆಯಡಿ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ವಿಭಜಿಸಲಾಗಿದೆ. ಬೆಂಗಳೂರು-ನಿಡಘಟ್ಟದ ನಡುವಿನ ಕಾಮಗಾರಿಗಳು ಈಗಾಗಲೇ ಶೇ.51ರಷ್ಟು ಪೂರ್ಣಗೊಂಡಿದ್ದು, ನಿಡಘಟ್ಟ-ಮೈಸೂರು ನಡುವಿನ ಕಾಮಗಾರಿಗಳು ಶೇ.೩೦ರಷ್ಟು ಮುಗಿದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಪಾಸ್ ಗಳ ರೂಪದಲ್ಲಿ ೫೩ ಕಿ.ಮೀ.ಗಳಷ್ಟು ಗ್ರೀನ್ ಫೀಲ್ಡ್ ರಸ್ತೆಗಳಿರುತ್ತವೆ: ಬಿಡದಿ (೭ ಕಿ.ಮೀ.ಗಳು), ರಾಮನಗರ-ಚನ್ನಪಟ್ಟಣ (೨೨ ಕಿ.ಮೀ.ಗಳು), ೩.೫ ಕಿ.ಮೀ.ಗಳಷ್ಟು ಎತ್ತರಿಸಿದ ಹೆದ್ದಾರಿಯೂ ಒಳಗೊಂಡಂತೆ ಮದ್ದೂರು (೭ ಕಿ.ಮೀ.ಗಳು), ಮಂಡ್ಯ (೧೦ ಕಿ.ಮೀ.ಗಳು) ಹಾಗೂ ಶ್ರೀರಂಗಪಟ್ಟಣ (೭ ಕಿ.ಮೀ.ಗಳು)
ಸುದ್ದಿ ಮೂಲ: ಬೆಂಗಳೂರು ಮಿರರ್
Key words: Government – Bangalore-Kodagu- highway- project