ಗದಗ,ಮೇ,6,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.
ಗದಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ. ಸಚಿವ ಅಶ್ವಥ್ ನಾರಾಯಣ್ ಸಂಬಂಧಿಕರು ಸೆಲೆಕ್ಟ್ ಆಗಿದ್ದಾರೆ. ಅಶ್ವಥ್ ನಾರಾಯಣ್ ಸೋದರ ಹಣ ಪಡೆದಿರುವ ಬಗ್ಗೆ ಮಾಹಿತಿ ಇದೆ. ಅದಕ್ಕೆ ರಾಜೀನಾಮೆ ಕೊಡಿ ಅಂತಾ ಕೇಳಿದ್ದು. ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಅಮೃತ್ ಪೌಲ್ ರನ್ನ ವರ್ಗಾವಣೆ ಮಾಡಿದ್ದೇಕೆ. ಈ ಅಕ್ರಮದಲ್ಲಿ ಸಚಿವರೇ ಭಾಗಿಯಾಗಿದ್ದಾರೆ. ಸಚಿವರಿಗೆ ಗೊತ್ತಿಲ್ಲದೇ ಹಗರಣಗಳು ನಡೆಯುತ್ತಾ. ಹೀಗಾಗಿ ಹಗರಣ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಪ್ರಿಯಾಂಕ್ ಖರ್ಗೆಯನ್ನ ವಿಚಾರಣೆಗೆ ಕರೆಯುವ ಅಧಿಕಾರ ಇಲ್ಲ. ದಾಖಲಾತಿಗಳಿದ್ರೆ ಕೊಡಿ ಅಂತಾ ಕೇಳಬಹುದು ಅಷ್ಟೆ ಎಂದರು.
Key words: Government -BJP –scams-CID-investigation-Former CM-Siddaramaiah.