ಬೆಂಗಳೂರು,ಫೆಬ್ರವರಿ,25,2021(www.justkannada.in): 3 ಸಾವಿರ ಬಸ್ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನಮ್ಮ ಆಸ್ತಿ ಶ್ಯೂರಿಟಿ ಕೊಟ್ಟಿದ್ದೇವೆ . ಹೆಚ್ಚಿಗೆ ದರ ಮಾಡಲು ಸಿಟಿ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ 9 ಲಕ್ಷ ಕಿ. ಮೀ ಓಡಿರುವ ಬಸ್ ಗಳನ್ನ ಸ್ಕ್ರಾಪ್ ಗೆ ಹಾಕಬೇಕಾಗುತ್ತೆ. ಈ ನಡುವೆ 600-700 ಬಸ್ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತದೆ. 3 ಸಾವಿರ ಬಸ್ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 300 ಎಲೆಕ್ಟ್ರಾನಿಕ್ ಬಸ್ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಗೂ ನಮಗೆ ಯಾವುದೇ ಸಂಬಂಧ ಇಲ್ಲ. ನಮ್ಮ ಸಿಬ್ಬಂದಿ ನಮ್ಮ ಹತ್ತಿರ ಬಂದು ಸಮಸ್ಯೆ ಬಗೆಹರಿಸಿಕೊಳ್ಳಲಿ, ರೈತ ಸಂಘದ ಹತ್ತಿರ ಹೊದರೇ ಆಗಲ್ಲ ಎಂದು ಲಕ್ಷ್ಮಣ್ ಸವದಿ ತಿಳಿಸಿದರು. ಲಾರಿ ಮುಷ್ಕರ ವಿಚಾರ ಕೇಂದ್ರ ಸರ್ಕಾರ ಗಮನ ಹರಿಸಲಿದೆ ಎಂದರು.
Key words: Government – buy- three thousand –buses-DCM- Laxman Savadi.