ಬೆಂಗಳೂರು,ಆ,1,2022(www.justkannada.in): ಸರ್ಕಾರ 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲಿದೆ. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಗನ್ ಹಿಡಿದುಕೊಂಡು ಓಡಾಡುವ ಸ್ಥಿತಿ ಇದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ. ಸಿಎಂ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಳ್ಳಬೇಕು. ಪ್ರತಿಬಾರಿಯೂ ಸಿಎಂ ಮೌನವಾಗಿಯೇ ಇರುತ್ತಾರೆ. 3 ವರ್ಷಗಳಿಂದ ಸರ್ಕಾರ ಬೇಸರ ತರಿಸಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ ಭ್ರಷ್ಟ ಅಪ್ರಮಾಣಿಕ ಕಾಂಗ್ರೆಸ್ಸಿಗರನ್ನ ಸೇರಿಸಿಕೊಂಡಿರಿ. ಆಜಾನ್ ವಿರುದ್ದ ಕ್ರಮ ತೆಗೆದುಕೊಳ್ಳಲು ವಿಫಲರಾದ್ರಿ. ಆದರೆ ಹೆದರಿ ಚಾಲಿಸಾ ಅಭಿಯಾನದ ವಿರುದ್ಧ ಕ್ರಮ ಕೈಗೊಂಡಿರಿ. ಬಿಜೆಪಿ ಅತಿರೇಕದ ಕ್ಷಣ ಎದುರಿಸುತ್ತಿದೆ. ಈ ಬಾರಿ ಅಸಮಾಧಾನ ಕಾಂಗ್ರೆಸ್ ಜೆಡಿಎಸ್ ನಿಂದ ಅಲ್ಲ. ಇದು ಬಿಜೆಪಿ ಸ್ವಯಂಸೇವಕರ ಅಸಮಾಧಾನದ ಸೇಡು ಎಂದು ಹರಿಹಾಯ್ದರು.
ಇದೇ ವೇಳೆ ಕಾರ್ಯಕರ್ತರ ಬಗ್ಗೆ ಸಂಸದ ಸಿದ್ದೇಶ್ವರ್. ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಚಕ್ರವರ್ತಿ ಸೂಲಿಬೆಲೆ, ರಾಜೀನಾಮೆಯಿಂದ ತೊಂದರೆ ಇಲ್ಲ ಅಂದರು. ಬಿಜೆಪಿ ರಾಝ್ಯಘಟಕದಿಂದಸರಣಿ ವೈಪಲ್ಯ ಸ್ವಯಂ ಸೇವಕರನ್ನ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದರು.
Key words: government -Chakraborty Sulibele – against -BJP.