ಮೈಸೂರು,ಆಗಸ್ಟ್,26,2022(www.justkannada.in): ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಪೇಪರ್ ನೋಡಿದರೆ ಬಿಜೆಪಿ ಪಕ್ಷದ ಒಂದಲ್ಲ ಒಂದು ಭ್ರಷ್ಟಾಚಾರ ಬಗ್ಗೆ ಇದ್ದೆ ಇರುತ್ತೆ. ಪಿಎಸ್ಐ ಹಾಗೂ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ನಡೆದಿದೆ. ಬಿಜೆಪಿ ಶಾಸಕರು,ಸಚಿವರು ಗುತ್ತಿಗೆದಾರರಿಂದ 50%ಕಮಿಷನ್ ಆರೋಪ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಸಚಿವರಾದ ಮಾಧುಸ್ವಾಮಿರವರು ಸರ್ಕಾರ ನಡೆಯುತ್ತಿಲ್ಲ,ಮ್ಯಾನೇಜ್ ಮಾಡ್ತಿದ್ದೇವೆ ಅಂತ ಹೇಳಿದ್ದಾರೆ. ಈ ಸರ್ಕಾರ ಆಡಳಿತದಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ಶ್ರೀಮಂತರ ಸಾಲವನ್ನ ಮಾತ್ರ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಆದರೆ ಬಡವರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಾರೆ.
ನಮ್ಮ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನ ಸರ್ಕಾರ ರದ್ದು ಮಾಡುತ್ತಿದೆ. ಬಡವರ ಹೊಟ್ಟೆ ಮೇಲೆ ಹೊಡೆದರೆ ಬಿಜೆಪಿ ಸರ್ಕಾರಕ್ಕೆ ಒಳ್ಳೇದಾಗಲ್ಲ. ಬಿಪಿಲ್ ಕಾರ್ಡ್ ರದ್ದಿಗೆ ಮುಂದಾದರೆ ಸರ್ವನಾಶವಾಗ್ತಾರೆ ಎಂದು ಕಿಡಿಕಾರಿದರು.
Key words: Government -completely -failed to -law and order – Yathindra Siddaramaiah