ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ – ಆರೋಗ್ಯ ಸಚಿವ ಡಾ ಸುಧಾಕರ್ ಎಚ್ಚರಿಕೆ.

ಮೈಸೂರು,ಮಾರ್ಚ್,7,2022(www.justkannada.in): ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ ಕೈಗೊಳ್ಳಲಾಗುವುದು  ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಜನೌಷಧ ಎಲ್ಲಾ ರೀತಿಯಲ್ಲೂ ಪರಿಣಾಮಕಾರಿಯಾಗಿದೆ. ಜೊತೆಗೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಕೆಲವರು ಮಾತ್ರ ಇದನ್ನ ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಮಟ್ಟಕ್ಕೆ ಜನೌಷಧವನ್ನ ತೆಗೆದುಕೊಂಡು ಹೋಗಲಾಗವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಜನೌಷಧ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು.

ಜನೌಷಧ ಬಳಕೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಮುಂದೆ ಮೊದಲ ಸ್ಥಾನ ಪಡೆಯಲು ಇನ್ನೂ ಹೆಚ್ಚಿನ ಕೇಂದ್ರ ತೆರಯಲಾಗುವುದು. ಕೆಲವರು ಧರಸಿಲು ಬ್ರಾಂಡೆಡ್ ಬಟ್ಟೆಯೇ ಬೇಕು ಅಂತಹವರು ಬೇರೆ ಬ್ರಾಂಡ್ ಔಷಧಿ ಖರೀದಿ ಮಾಡುತ್ತಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: government -doctor -Minister Dr Sudhakar -warns.

ENGLISH SUMMARY….

Govt. doctors who prescribe pvt. company medicines will have to face action: Health Minister Dr. K. Sudhakar
Mysuru, March 7, 2022 (www.justkannada.in): Health and Medical Education Minister Dr. K. Sudhakar has warned doctors who are serving in government hospitals will have to face action if they prescribe private company medicines to the patients.
Speaking to the presspersons in Mysuru today, Minister Dr. K. Sudhakar expressed his view that the Janaushad is very effective in all ways. “Medicine sold at Janaushad kendras are also available at cheaper rates. But only a few people are utilizing it. We have plans to open Janaushad kendras at the village level. Every Primary Healthcare Centre will have a Janaushad kendra in the coming days,” he observed.
He also mentioned that Karnataka is in the third place in the country concerning using of Janaushad kendras. “More Janaushad kendras will be opened to ensure that our state will emerge on the top. A few people like to wear only branded clothes, such people also prefer branded medicine only,” he added.
Keywords: Health Minister Dr. K. Sudhakar/ Janaushad kendras/ village-level