ಮೈಸೂರು,ಸೆಪ್ಟಂಬರ್,20,2021(www.justkannada.in): ಕೊರೊನಾ ಕೆಲಸ ಮಾಡಿದ ವೈದ್ಯರಿಗೆ ಸಂಬಳ ಸರ್ಕಾರ ಸಂಬಳ ನೀಡದೆ 1.26 ಕೋಟಿ ಬಾಕಿ ಉಳಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಸಂಬಳ ನೀಡುವಂತೆ ಆಗ್ರಹಿಸಿ ಕಿರಿಯ ನಿವಾಸಿ ವೈದ್ಯರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
2 ಸಾವಿರಕ್ಕೂ ಹೆಚ್ಚು ವೈದ್ಯರು ಎಂ.ಬಿ.ಬಿ.ಎಸ್ ಮುಗಿಸಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಲ್ಲಿದ್ದರು. ಈ ನಡುವೆ ಸರ್ಕಾರ ಕೋವಿಡ್ ಕರ್ತವ್ಯಕ್ಕಾಗಿ ನಿಯೋಜನೆ ಮಾಡಿಕೊಂಡಿತ್ತು. ಮೈಸೂರು ಮೆಡಿಕಲ್ ಕಾಲೇಜಿನ 126 ಜನ ವೈದ್ಯರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿ ತಲಾ 40 ರೂ ಸಾವಿರ ಸಂಬಳ ನಿಗದಿ ಮಾಡಲಾಗಿತ್ತು. ಜೊತೆಗೆ ಕೋವಿಡ್ ವಿಶೇಷ ಕರ್ತವ್ಯಕ್ಕೆ ತಿಂಗಳಿಗೆ 10 ಸಾವಿರ ಹೆಚ್ಚುವರಿಯಾಗಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಆದರೆ ಎಂಎಂಸಿ ಇದರಂತೆ ಜುಲೈ ಹಾಗೂ ಆಗಸ್ಟ್ ತಿಂಗಳ ಸಂಬಳವನ್ನು ಇನ್ನು ಪಾವತಿ ಮಾಡಿಲ್ಲ. ಮೈಸೂರು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲೇ 126 ವೈದ್ಯರಿಗೆ ತಲಾ 1 ಲಕ್ಷ ರೂಪಾಯಿಯಂತೆ 1 ಕೋಟಿ 26 ಲಕ್ಷ ಸಂಬಳವನ್ನು ಸರ್ಕಾರ ಪಾವತಿಸಬೇಕಾಗಿದೆ. ಇತ್ತ ಕಾಲೇಜು ಆಡಳಿತಮಂಡಳಿ ಕೇಳಿದರೆ ಅಧಿಕಾರಿಗಳು ಸರ್ಕಾರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಇತ್ತ ಸಂಬಳ ಇಲ್ಲದೆ ಮನೆಯವರ ಬಳಿ ಕೈಚಾಚುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಸರ್ಕಾರ ಸಮಸ್ಯೆ ಬಗೆಹರಿಸುವಂತೆ ಕಿರಿಯ ನಿವಾಸಿ ವೈದ್ಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
Key words: government -does not- pay -doctors -worked –Corona- Doctors –protest-mysore