25 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಮೀನು ಒತ್ತುವರಿ ತೆರವು

ಮೈಸೂರು,ಡಿಸೆಂಬರ್,20,2024 (www.justkannada.in): ಮೈಸೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 25 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು. ಮೈಸೂರು ತಾಲೂಕು, ಜಯಪುರ ಹೋಬಳಿ, ಕೇರಗಳ್ಳಿ ಗ್ರಾಮದ ಸರ್ವೆ ನಂಬರ್ 60 ರಲ್ಲಿ 5-20 ಗುಂಟೆ ಸರ್ಕಾರಿ ಜಮೀನನ್ನು ಜೂಲೇಗೌಡ ಎಂಬುವವರು  ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದರು.

ಮೈಸೂರು ತಾಲ್ಲೂಕು ತಹಸಿಲ್ದಾರ್ ಕೆ.ಎಂ ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿ, ಅಂದಾಜು 25 ಕೋಟಿ ಬೆಲೆಬಾಳುವ  ಸದರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.

ಈ ವೇಳೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಚಿಕ್ಕಣ್ಣ, ಪೊಲೀಸ್ DySP ಕರಿಂ ರಾವತರ್, ಪೊಲೀಸ್ ಸಬ್-ಇನ್ಸ್ಪೆಕ್ಟರ್ ಪ್ರಕಾಶ್ ಇತ್ತಿಮನಿ, ಉಪ ತಹಸಿಲ್ದಾರ್ ಕೆ.ಎಸ್.ಕುಬೇರ, ರಾಜಸ್ವ ನಿರೀಕ್ಷಕ ಸಿ. ವಿ.ಲೋಹಿತ್, ಹಾಗೂ ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು  ಉಪಸ್ಥಿತರಿದ್ದರು.

Key words: Government land,  encroachment, cleared, mysore