ರಾಜ್ಯದಲ್ಲಿ ಕಾರ್ಮಿಕ ಇಲಾಖೆಯನ್ನ ಮಾದರಿ ಇಲಾಖೆಯಾಗಿ ಮಾಡಲು ಸರಕಾರದಿಂದ ದಿಟ್ಟ ನಿಲುವು- ಸಚಿವ ಶಿವರಾಂ ಹೆಬ್ಬಾರ್ …

ಬೆಂಗಳೂರು,ಫೆ,17,2020(www.justkannada.in): ಕಾರ್ಮಿಕ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಉಪಯೋಗ ಹಾಗೂ ಮಾದರಿ ಇಲಾಖೆಯಾಗಿ ಮಾಡುವಲ್ಲಿ ನಮ್ಮ ಸರಕಾರ ದಿಟ್ಟ ನಿಲುವು ಹೊಂದಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವರಾದ ಶಿವರಾಂ ಹೆಬ್ಬಾರ್ ತಿಳಿಸಿದರು.

ಬೆಂಗಳೂರು ನಗರದ ಖಾಸಗಿ ಹೋಟೆಲ್ ನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ಔದ್ಯೋಗಿಕ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಸ್ವಾಸ್ಥ್ಯ ಬಗ್ಗೆ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್, ಕಾರ್ಮಿಕರಿಗೆ ಕೆಲಸದ ಬಗ್ಗೆ ಬದ್ದತೆ ಇದ್ದಾಗ ಮಾತ್ರ ಅವರ ಹೋರಾಟಕ್ಕೆ ಒಂದು ಅರ್ಥ ಬರುತ್ತದೆ. ದೇಶಕ್ಕೆ ಅನ್ನ ನೀಡುವಲ್ಲಿ ಕಾರ್ಮಿಕರ ಪಾತ್ರ ದೂಡ್ಡದಿದೆ. ಹೀಗಾಗಿ ಅವರನ್ನು ವಿಶೇಷ ದೃಷ್ಟಿಯಿಂದ ನೋಡಬೇಕಾಗಿದೆ. ಅವರನ್ನು ಬಳಸುವ ಭಾಷೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಮಾಲೀಕರು ಮತ್ತು ಕಾರ್ಮಿಕರ ಮಧ್ಯೆ ಉತ್ತಮ ಭಾಂದವ್ಯ ಇದ್ದಾಗ ಮಾತ್ರ ವಿಶೇಷ ಮಾರುಕಟ್ಟೆ ಸಾಧ್ಯ. ಅವರು ಹೇಳುವ ಗಂಭೀರ ಸ್ವರೂಪದ ವಿಷಯವನ್ನು ಅರ್ಥ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಕಾರ್ಮಿಕ ಇಲಾಖೆ ಬಗ್ಗೆ ಕೀಳರಿಮೆ ಇರುವುದನ್ನು ಕಾಣಬಹುದು. ಅದರೆ ಇದು ಕಾರ್ಮಿಕರ ಬದುಕನ್ನು ರಕ್ಷಿಸುವ ಹೊಣೆ ಹೊತ್ತ ಇಲಾಖೆ. ಅವರ ಹಕ್ಕುಗಳ ರಕ್ಷಣೆ ಆಗಬೇಕಾಗಿದೆ ಎಂದರು.

ಕಾರ್ಮಿಕ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಉಪಯೋಗ ಹಾಗೂ ಮಾದರಿ ಇಲಾಖೆಯಾಗಿ ಮಾಡುವಲ್ಲಿ ನಮ್ಮ ಸರಕಾರ ದಿಟ್ಟ ನಿಲುವು ಹೊಂದಿದೆ. ಅಲ್ಲದೆ ನೆರೆ ರಾಜ್ಯ ಗಳಾದ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕರ್ನಾಟಕದ ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಲು ಮುಂದಾಗಲಿದೆ ಎಂದರು.  ಜೀರೊ ವಿಷನ್ ಹೆಸರಿನ ಈ ಸಮ್ಮೇಳನದಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತ್ಸ್ನಾ ರೆಡ್ಡಿ, ಅಪರ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್, ಅಂತರಾಷ್ಟ್ರೀಯ ತಜ್ಞರಾದ ಬಿ.ಕೆ.ಸಾಹು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತಸ್ನಾ ರೆಡ್ಡಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Key words: government- model department – Labor Department – state-Minister -Shivaram Hebbar.